ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದೂಗಳು ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ- ಹಿಂದೂ ಸಂಘಟನೆ ಹಾಗೂ ಪೋಷಕರಿಂದ ಪ್ರತಿಭಟನೆ.

Coastal Bulletin
ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಹಿಂದೂಗಳು ಹಾಗೂ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ- ಹಿಂದೂ ಸಂಘಟನೆ ಹಾಗೂ ಪೋಷಕರಿಂದ ಪ್ರತಿಭಟನೆ.

ಮಂಗಳೂರು: ನಗರದ ಖಾಸಗಿ ಶಾಲೆಯೊಂದರ ಶಿಕ್ಷಕಿ ತರಗತಿಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಶನಿವಾರ ಕೆಲವು ವಿದ್ಯಾರ್ಥಿಗಳ ಹೆತ್ತವರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲೆಗೆ ತೆರಳಿ ತರಾಟೆಗೆ ತೆಗೆದುಕೊಂಡರು.

ಮಂಗಳೂರಿನ ಜೆರೊಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಪ್ರಭಾ ಎನ್ನುವವರು ಶ್ರೀರಾಮನ ಅಸ್ತಿತ್ವನ್ನೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.ಅಯೋಧ್ಯೆಯಲ್ಲಿ ರಾಮನನ್ನು ಕೂರಿಸಿದರೆ ರಾಮ ಬರ್ತಾನ ಎಂದು ಶಿಕ್ಷಕಿ ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿ ತಾಯಿಯ ಹೇಳಿಕೆ ಪ್ರಕಾರ ಶಿಕ್ಷಕಿ ಪ್ರಭಾ ಅವರು ವರ್ಕ್  ಈಸ್ ವರ್ಶಿಪ್ ಎನ್ನುವ ಪಾಠದ ಬಗ್ಗೆ ವಿವರಿಸುತ್ತಿರುವಾಗ ಅಯೋಧ್ಯೆಯಲ್ಲಿ ಮಸೀದಿ ಒಡೆದು ರಾಮ ಮಂದಿರ ಕಟ್ಟುವ ಅಗತ್ಯವಿತ್ತೇ?ಡೆಕರೇಶನ್ ಮಾಡಿ ರಾಮನ ಕಲ್ಲನ್ನು ಅಲ್ಲಿ ಇಟ್ಟ ಕೂಡಲೇ ರಾಮ ಬರ್ತಾನಾ? ನೀವು ದೇವಸ್ಥಾನಗಳಿಗೆಲ್ಲಾ ಯಾಕೆ ಹೋಗ್ತೀರಾ ಅಲ್ಲಿರುವುದು ಕೇವಲ ಕಲ್ಲು ಎಂದು ಪಠ್ಯಕ್ಕೆ ಸಂಬಂಧ ಪಡದ ವಿಷಯಗಳ ಬಗ್ಗೆ ಮಾತನಾಡಿದ್ದಾರೆನ್ನಲಾಗಿದೆ.

ನಿಮಗೆ ಮೂಲವೇ ಯಾವುದು ಅಂತ ಗೊತ್ತಿಲ್ಲ,ಗೋದ್ರಾ ಹತ್ಯಾಕಾಂಡ ಆದಾಗಳೂ

ಮೋದಿಯವರು ಮುಖ್ಯಮಂತ್ರಿಯಾಗಿದ್ದರು ಅವರೇ ಹತ್ಯೆಗೆ ಪ್ರೇರೇಪಿಸಿದ್ದಾರೆ,ಹಿಂದೂಗಳು ಬರೇ ಕೆಟ್ಟವರು ಎಂದು ಶಿಕ್ಷಕಿ ಮಾತನಾಡಿದ್ದಾರೆನ್ನಲಾಗಿದೆ.

ಪೋಷಕರ ಪ್ರಕಾರ ಶಿಕ್ಷಕಿಗೆ ಹಿಂದೂ ಧರ್ಮದ ಬಗ್ಗೆ ಶಾಲೆಯಲ್ಲಿ ಮಾತನಾಡುವುದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಅವರು ಬೇಕಾದಲ್ಲಿ ಪ್ರೆಸ್ ಮೀಟ್ ಕರೆದು ಹೇಳಿಕೆ ನೀಡಲಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಹೇಳಿದ ವಿಚಾರಗಳು ಖಂಡನಾರ್ಹ ಎಂದಿದ್ದಾರೆ.

ಮಹಾಭಾರತ,ರಾಮಾಯಣ ಒಂದು ಕಾಲ್ಪನಿಕ,ಕಟ್ಟುಕಥೆ ಅದಕ್ಕೆ ಇತಿಹಾಸ ಇಲ್ಲ ಎಂದಿರುವ ಶಿಕ್ಷಕಿ ತಾನು ತುಂಬಾ ವರ್ಷಗಳಿಂದ ಇದೇ ರೀತಿ ಎಲ್ಲಾ ತರಗತಿಯಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಲೆಯ ಮುಂಭಾಗದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಪೋಷಕರು ಪ್ರತಿಭಟನೆ ಮಾಡಿದ್ದು ಪೊಲೀಸರು ಶಿಕ್ಷಕಿಯನ್ನು ವಿಚಾರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.

Leave a Comment