ತುಂಬೆ : ಬಿ ಎ ವಿದ್ಯಾ ಸಂಸ್ಥೆಗಳ 36ನೇ ವಾರ್ಷಿಕ ಕ್ರೀಡಾಕೂಟ.

Coastal Bulletin
ತುಂಬೆ : ಬಿ ಎ ವಿದ್ಯಾ ಸಂಸ್ಥೆಗಳ 36ನೇ ವಾರ್ಷಿಕ ಕ್ರೀಡಾಕೂಟ.

ಬಂಟ್ವಾಳ :ಪಾಠ ಪ್ರವಚನದಂತೆ ಆಟೋಟಗಳು ಅತೀ ಅಗತ್ಯ. ಯಾವ ವಿದ್ಯಾರ್ಥಿ ಜೀವನದಲ್ಲಿ ಆಟೋಟಗಳಲ್ಲಿ ಭಾಗವಹಿಸುತ್ತಾರೋ ಅಂಥವರು ಮುಂದಿನ ಜೀವನದಲ್ಲಿ ಪ್ರೀತಿ-ಸ್ನೇಹದಿಂದ ಬದುಕು, ಕಟ್ಟಿಕೊಳ್ಳುತ್ತಾರೆ. ಅಲ್ಲದೆ ಜೀವನದುದ್ದಕ್ಕೂ ಸಾಧನೆಯ ಹಾದಿಯಲ್ಲಿ ಹೋಗುತ್ತಿರುತ್ತಾರೆ ಸೋಲೆ ಗೆಲುವಿನ ಸೋಪಾನ ಎಂಬುದಾಗಿ ಜ್ಯೋತಿಷಿ, ಸಂಸ್ಕಾರ ಭಾರತಿ ತಾಲೂಕು ಸಂಚಾಲಕ ಅನಿಲ್ ಪಂಡಿತ್ ಹೇಳಿದರು.

ಅವರು ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ 36ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟನೆ ಗೈದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಂಬೆ ವಿದ್ಯಾ ಸಂಸ್ಥೆಯ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹಮ್ಮದ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿ ಬರಲು ಆಟೋಟಗಳ ಭಾಗವಹಿಸುವಿಕೆ ಅತೀ ಮುಖ್ಯ ಎಂದರು.  

ಕ್ರೀಡಾಕೂಟದ ಉದ್ಘಾಟನಾ ವೇಳೆ ಬಿ.ಎ. ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಬಿಳಿ,ಕೆಂಪು, ಹಸಿರು ಹಾಗೂ ಬಿಳಿ ತಂಡಗಳಿಂದ ಆಕರ್ಷಕ ಪಥ ಸಂಚಲನೆ ಹಾಗೂ ಪ್ರಾಥಮಿಕ ವಿದ್ಯಾರ್ಥಿ/ನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಕ್ರೀಡಾ ಕಾರ್ಯದರ್ಶಿ ಅಹಮ್ಮದ್‌ ಜಶೀರ್ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ

ವಿಧಿ ಬೋಧಿಸಿದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು.  

ಪಿಟಿಎ ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಮ್ಯಾಕ್ಸಿಂ, ಕುವೆಲ್ಲೋ, ಶಾಫಿ ಅಮ್ಮೆಮಾರ್, ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್, ಆಡಳಿತಾಧಿಕಾರಿ ಕಿಶೋರ್ ಸುವರ್ಣ , ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಮ್ ಜೆ.ನಾಯಕ್ .ಕೆ. ದೈಹಿಕ ಶಿಕ್ಷಣ, ಶಿಕ್ಷಕಿ ಮೋಲಿ ಎಡ್ನಾ, ಗಫೂರ್ ಮುಂತಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿ.ಎಸ್.ಭಟ್ ಸ್ವಾಗತಿಸಿದರು. ಕನ್ನಡ ಶಿಕ್ಷಕ ರಮೇಶ್ ಮೆಲ್ಕಾರ್ ನಿರೂಪಿಸಿ, ದೈಹಿಕ ಶಿಕ್ಷಣ ಜಗದೀಶ್ ರೈ ವಂದಿಸಿದರು.

Leave a Comment