ಸೆ.9ರಿಂದ ಜೇಸಿ ಜೋಡುಮಾರ್ಗ ನೇತ್ರಾವತಿಯಿಂದ ಜೇಸಿ ಸಪ್ತಾಹ ವಿವಿಧ ಕಾರ್ಯಕ್ರಮ.

Coastal Bulletin
ಸೆ.9ರಿಂದ ಜೇಸಿ ಜೋಡುಮಾರ್ಗ ನೇತ್ರಾವತಿಯಿಂದ ಜೇಸಿ ಸಪ್ತಾಹ ವಿವಿಧ ಕಾರ್ಯಕ್ರಮ.

ಬಂಟ್ವಾಳ:ಜೇಸಿ ಜೋಡುಮಾರ್ಗ ನೇತ್ರಾವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಸೆ.9ರಿಂದ ಮೊದಲ್ಗೊಂಡು 15ರತನಕ ಜೇಸಿ ಸಪ್ತಾಹ ಕಾರ್ಯಕ್ರಮಗಳು ಜೆಸಿಐ ಭಾರತದ ಮಾರ್ಗಸೂಚಿಯಂತೆ ನಡೆಯುಲಿದೆ, ಈಗಾಗಲೇ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಧ್ವಜಾರೋಹಣ ಕಾರ್ಯಕ್ರಮ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ರಮ್ಯಾ ಸೋಮಯಾಜಿ ಅವರು ಚಾಲನೆ ನೀಡಿದ್ದಾರೆ ಬಂಟ್ವಾಳ ಜೆಸಿಐ ಘಟಕ ಅಧ್ಯಕ್ಷೆ ತೃಪ್ತಿ ಹೇಳಿದರು.

ಬಿ.ಸಿ.ರೋಡಿನಲ್ಲಿ ಸೆ. 9ರಂದು ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ' ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ಸೇರಿದಂತೆ ವಿವಿಧೆಡೆ ನಾತಯಕತ್ವ ತರಬೇತಿ ಮತ್ತು ಮ್ಯಾರಥಾನ್, ಪ್ರತಿಭಾ ಪ್ರದರ್ಶನ ಹಾಗೂ ಸದಸ್ಯರಿಗೆ ಗ್ರಾಟಿಟ್ಯೂಡ್ ಪತ್ರ ವಿತರಣೆ ನಡೆಯಲಿದೆ' ಎಂದು

ಅವರು ವಿವರಿಸಿದರು.

ಈಗಾಗಲೇ ಜೆಸಿಐ ಒಟ್ಟು 30 ಮಂದಿ ಸದಸ್ಯರನ್ನು ಹೊಂದಿದ್ದು, ಹಲವಾರು ಮಂದಿ ನಾಯಕರು ಮತ್ತು ತರಬೇತುದಾರರನ್ನು ಸಮಾಜಕ್ಕೆ ಅರ್ಪಿಸಿದೆ ಎಂದು ಮಾಜಿ ಅಧ್ಯಕ್ಷೆ ಗಾಯತ್ರಿ ಲೋಕೇಶ್ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಸದಸ್ಯೆ ತೃಷಾ, ಮಾರ್ಗದರ್ಶಕ ಜಯಾನಂದ ಪೆರಾಜೆ ಮತ್ತಿತರರು ಇದ್ದರು

Leave a Comment