ಬಂಟ್ವಾಳ:ಇಲ್ಲಿನ ಮೆಲ್ಕಾರ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಮಹಿಳಾ ಕಾನ್ಸ್ ಟೇಬಲ್ ಸಕ್ಕುಬಾಯಿ ಎಂಬವರಿಗೆ ಸಹದ್ಯೋಗಿಗಳು ಈಚೆಗೆ ಒಟ್ಟು ಸೇರಿ ಠಾಣೆಯಲ್ಲೇ ಸೀಮಂತ ನೆರವೇರಿಸಿ ಗಮನ ಸೆಳೆದಿದ್ದಾರೆ.
ಮೂಲತಃ ಗದಗ ಜಿಲ್ಲೆ ನಿವಾಸಿ ಸಕ್ಕು ಬಾಯಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಆಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದುಡಿಯುತ್ತಿದ್ದರು. ಇದೀಗ ತುಂಬು ಗಭರ್ಿಣಿ ಆಗಿರುವ ಸಕ್ಕುಬಾಯಿ
ಇವರನ್ನು ರಜೆಯಲ್ಲಿ ಊರಿಗೆ ತೆರಳುವ ಮೊದಲು ಠಾಣಾಧಿಕಾರಿ ಮೂರ್ತಿ ನೇತೃತ್ವದಲ್ಲಿ ಸಿಬ್ಬಂದಿಗಳು ಒಟ್ಟು ಸೇರಿ ಸೀಮಂತ ನೆರವೇರಿಸಿ ಅವರ ತಾಯಿಯೊಂದಿಗೆ ಊರಿಗೆ ಕಳುಹಿಸಿ ಗಮನ ಸೆಳೆದಿದ್ದಾರೆ.















