Coastal Bulletin

ಬೆಂಗಳೂರಿನ :ಪ್ರಮುಖ ತುಳು ಸಂಘಟನೆ, ಕಳೆದ ವರ್ಷ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಸಂಘಟನಾ ಪ್ರಶಸ್ತಿ ಪಡೆದ ಸಂಸ್ಥೆ ತುಳುವೆರೆಂಕುಲು ಬೆಂಗಳೂರು (ರಿ.)ಇದರ "ಬೆಂಗ್ಳೂರು ತುಳು ಪರ್ಬ -2022"ಎಂಬ ಕಾರ್ಯಕ್ರಮ ಮೇ 15 ಆದಿತ್ಯವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದೆ.

ಈ ಕಾರ್ಯಕ್ರಮವನ್ನು ಡಾ. ಹೇಮಾವತಿ ಹೆಗ್ಗಡೆ ಧರ್ಮಸ್ಥಳ ಉದ್ಘಾಟಿಸಲಿದ್ದಾರೆ .  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿ  ವಿ. ಸುನೀಲ್ ಕುಮಾರ್,  ಡಿ.ಸುರೇಂದ್ರ ಕುಮಾರ್,  ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್,   ತುಳು-ಕನ್ನಡ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಘಟಕರಾದ ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ,  ಪ್ರೊ.ಕಬಡ್ಡಿ ಖ್ಯಾತಿಯ ಪ್ರಶಾಂತ್ ರೈ ಕೈಕಾರ ಮತ್ತು  ಸಚಿನ್ ಸುವರ್ಣ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ದೇಶ ವಿದೇಶ ದಲ್ಲಿ ಇರುವ  ಸಾಂಸ್ಕೃತಿಕ, ಕ್ರೀಡೆ, ಸಿನೆಮಾ, ರಾಜಕೀಯ, ಸಾಮಾಜಿಕ

ಕ್ಷೇತ್ರದ ಸಾಧಕ  ಗಣ್ಯರು ಬೆಂಗಳೂರಿನ ವಿವಿಧ ತುಳು - ಕನ್ನಡ ಸಂಘಟನೆಗಳು ಈ ತುಳು ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಬಿಸು ಆಚರಣೆ ಹಾಗೂ ತುಳು ಸಮುದಾಯದ ವಿಶೇಷ ಸಾಧಕರಿಗೆ ಪ್ರತಿಷ್ಠಿತ ವಾರ್ಷಿಕ "ಬಲಿಯೇಂದ್ರ ಪುರಸ್ಕಾರ" ಹಾಗೂ ವಿವಿಧ ಕ್ಷೇತ್ರದ ಯುವ ಸಾಧಕರಿಗೆ ಗೌರವ ಅಭಿನಂದನೆ ನಡೆಯಲಿಕ್ಕಿದೆ.

ಹೆಸರಾಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ  ಡಾ. ಹೇಮಾವತಿ ಹೆಗ್ಗಡೆ ಧರ್ಮಸ್ಥಳ ಇವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದ ಹಾಸ್ಯಮಯ ತುಳು ನಾಟಕ "ಕೃಷ್ಣ ಸಂಧಾನ "ಪ್ರದರ್ಶನಗೊಳ್ಳಲಿದೆ ಎಂದು ಸಮಿತಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


     

Leave a Comment