Coastal Bulletin

ಬಂಟ್ವಾಳ : ತಾಲೂಕಿನ ಕೂಡಿಬೈಲು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಗೆ ನಿರ್ಮಿಸಲಾದ ನೂತನ ಮಹಾದ್ವಾರ ಹಾಗೂ ಗೋಪುರದ ಮೇಲ್ಛಾವಣಿಯ ಲೋಕಾರ್ಪಣೆಗೊಳಿಸಲಾಯಿತು

ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ಮಹಾದ್ವಾರ ಹಾಗೂ ಗೋಪುರದ ಲೋಕಾರ್ಪಣೆ ನೆರವೇರಿಸಿ,ಇದು ಭಾವೈಕ್ಯತೆಗೆ ಶಕ್ತಿಯನ್ನು ತಂಬಿದಂತಾಗಿದೆ.ತಾನು ಜನಪ್ರತಿನಿಧಿಯಾಗಿದ್ದ ಕಾಲದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಕಾರಿಂಜಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಪಡಿಸಲಾಗಿದೆ ಎಂದರು.

ಇದೇ ವೇಳೆ‌ ಅಲ್ಲಿಪಾದೆಯಿಂದ ಹಳೆಗೇಟುವರೆಗೆ ರಸ್ತೆ ನಿರ್ಮಾಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಹಕರಿಸಿದ ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲೀಲಾವತಿ

ಅಂತರಗುತ್ತು, ಸಾಧನಾ ಅಂತರಗುತ್ತು, ಚಂದ್ರಕಾಂತಿ ಕೊಡಿಬೈಲು ಬಸದಿ, ಸಿರಿಲ್ ಸಿಕ್ವೆರಾ ಮದಿಮಾಲ್ ಬೆಟ್ಟು,ನಾವೂರ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕುಲಾಲ್, ಉಪಾಧ್ಯಕ್ಷೆ ಲವೀನಾ ಮೋರಸ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ,ಪದ್ಮಶೇಖರ್ ಜೈನ್, ಪ್ರಮುಖರಾದ ಜಿನರಾಜ ಅರಿಗ, ಬೇಬಿ ಕುಂದರ್, ಸುವರ್ಣ ಕುಮಾರ್ ಜೈನ್, ಸುರೇಶ್ ಜೋರ,ಕೊಲೀನ್ ಸಿಕ್ವೆರಾ, ಪುರಷೋತ್ತಮ ಬಂಗೇರ, ವಿನ್ಸೆಂಟ್ ಪಿಂಟೋ, ಅನಿಲ್ ವಾಲ್ಟರ್ ಮೊದಲಾದವರಿದ್ದರು. 

Leave a Comment