Coastal Bulletin

ಬಂಟ್ವಾಳ: ಕರ್ನಾಟಕ ಸರ್ಕಾರ ಕೊಡಮಾಡುವ ರಾಣಿ ಚೆನ್ನಮ್ಮ ಮಹಿಳಾ ಸಾಧಕ ಪ್ರಶಸ್ತಿಯನ್ನು ಬಂಟ್ವಾಳದ ವಾತ್ಸಲ್ಯಮಯಿ ಮಹಿಳಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥೆ ಬಿ.ಸಿ.ರೋಡಿನ ಯುವ ನ್ಯಾಯವಾದಿ ಶೈಲಜಾ ರಾಜೇಶ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರಿಂದ ಬೆಂಗಳೂರಿನ ರವೀಂದ್ರ ಕಲಾ ಕೇಂದ್ರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು

ಬಂಟ್ವಾಳದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನೆ ಸಂಸ್ಥೆಯನ್ನು 2012ರಲ್ಲಿ ಸ್ಥಾಪಿಸಿ ಆ ಮೂಲಕ ಮಹಿಳೆಯರ ಅಭಿವೃದ್ಧಿ ಹಾಗೂ ಹಕ್ಕುಗಳ ಬಗ್ಗೆ ಶ್ರಮಿಸುತ್ತಿರುವ ಶೈಲಜಾ ರಾಜೇಶ್ ಅವರನ್ನು ಸರಕಾರ ಈ ಪ್ರಶಸ್ತಿಗೆ ಗುರುತಿಸಿದೆ.

ಶೈಲಜಾ ರಾಜೇಶ್ ತನ್ನ

ಟ್ರಸ್ಟಿನ ಮೂಲಕ ನೂರಾರು ಮಹಿಳೆಯರ ಅಭಿವೃದ್ಧಿಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದರು. ವಿನೂತನ ಕಾರ್ಯಕ್ರಮಗಳನ್ನು ಸರಕಾರ ಗುರುತಿಸಿ ಈ ಪ್ರತಿಷ್ಠಿತ "ರಾಣಿ ಚೆನ್ನಮ್ಮ ಪ್ರಶಸ್ತಿ" ಯನ್ನು ನೀಡಿ ಗೌರವಿಸಿದೆ.


 

Leave a Comment