Coastal Bulletin

ಬಂಟ್ವಾಳ‌ : ಮಲ್ಲಿಗೆ ಪ್ರಿಯ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಳದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ‌ ಬುಧವಾರ ಬ್ರಹ್ಮರಥೋತ್ಸವ ಸಂಭ್ರಮ, ಸಡಗರದಿಂದ ನಡೆಯಿತು.

ಸಾವಿರಾರು ಮಂದಿ ಭಜಕರು‌ ಸರತಿಯಲ್ಲಿ ನಿಂತು ಶ್ರೀದೇವರಿಗೆ ಹೆಚ್ಚಿನ ಮಲ್ಲಿಗೆ ಹೂವನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥ

ಸಿದ್ದಿಗೆ ಪ್ರಾರ್ಥಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಜನ ಸಂದಣಿಯಿಂದಾಗಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.


Leave a Comment