ಬಂಟ್ವಾಳ: ಜೇಸಿಐ ಬಂಟ್ವಾಳ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೈಕಂಬದ ಸಹಯೋಗದಲ್ಲಿ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳೊಂದಿಗೆ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು
ಮಾ.7 ರಂದು ತಾಲೂಕಿನ ಬೋಳಂಗಡಿ ಅಂಗನವಾಡಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು ಬಂಟ್ವಾಳ ಪುರಸಭಾ ಅಧ್ಯಕ್ಷ ಮೊಹಮ್ಮದ್ ಶರೀಫ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾ. 8 ರಂದು ನೇತಾಜಿ ಯುವಕ ಸಂಘ ಕುಪ್ಪಿಲದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ ನಡೆಸಲಾಯಿತು. ಬಡಗ ಬೆಳ್ಳೂರಿನಲ್ಲಿ ಶ್ರೀ ಧರ್ಮಸ್ಥಳ ಸ್ವ ಸಹಾಯ ಸಂಘದ ಸದಸ್ಯರಿಗೆ ಮಾನಸಿಕ ಆರೋಗ್ಯ ಮಾಹಿತಿ ಹಾಗೂ ಸಮಾಲೋಚನಾ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಮಂಜುಳಾ ಅನಿಲ್ ರಾವ್ ಮಾಹಿತಿ ನೀಡಿದರು.
ಮಾ.9 ರಂದು ಬೊಂಡಾಲ ಅಂಗನವಾಡಿ ಕೇಂದ್ರದಲ್ಲಿ
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭ ಸಲ್ಲಿಸಿದ ಸೇವೆಗಾಗಿ ಡಾ. ಅಶ್ವಿನಿ ಕುಲಾಲ್ ಹಾಗೂ ದೀಕ್ಷಿತಾ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಬಂಟ್ವಾಳದ ಅಧ್ಯಕ್ಷ ರೋಶನ್ ರೈ, ನಿಕಟಪೂರ್ವ ಅಧ್ಯಕ್ಷ ಉಮೇಶ್ ಮೂಲ್ಯ, ಸ್ಥಾಪಕ ಅಧ್ಯಕ್ಷ ನಾಗೇಶ್ ಬಾಳೆಹಿತ್ಲು, ವಲಯ ಅಧಿಕಾರಿಗಳಾದ ರಶ್ಮಿ ಶೆಟ್ಟಿ, ಸಂತೋಷ್ ಜೈನ್, ಸದಸ್ಯರಾದ ಸದಾನಂದ ಬಂಗೇರ, ರಾಜೆಂದ್ರ, ವಚನ್ ಶೆಟ್ಟಿ, ಬಬಿತಾ, ದೀಪ್ತಿ ರೈ, ಡಾ ಆರತಿ, ಡಾ ಅಶ್ವಿನಿ ಕುಲಾಲ್, ಎಜೆ ಆಸ್ಪತ್ರೆಯ ವೈದ್ಯರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.















