ಬಂಟ್ವಾಳ:ವಿವಿಧ ಕಾರಣಗಳಿಂದ ವ್ಯಕ್ತಿ ಸ್ಮ್ರೃತಿ ತಪ್ಪಿದಾಗ ಎದೆಯನ್ನು ಹದವಾಗಿ ಒತ್ತುವುದು ಮತ್ತು ಉಸಿರು ಕೊಡುವುದರಿಂದ ಪ್ರಾಣಾಪಾಯದಿಂದ ಕಾಪಾಡಬಹುದು, ಜೀವ ಉಳಿಸುವುದಕ್ಕಿಂತ ಶ್ರೇಷ್ಠವಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂದು ಆಪ್ತರಕ್ಷಕ ಸಿಪಿಆರ್ ಆಯೋಜಕರಾದ ಡಾ.ಸಂದೀಪ್ ಬೇಕಲ್ ಹೇಳಿದರು
ಗುರುಕುಲ ಕಲಾ ಪ್ರತಿಷ್ಠಾನ (ರಿ) ದ.ಕ.,ಶಾರದಾ ಆಯುರ್ವೇದ ಆಸ್ಪತ್ರೆ ತಲಪಾಡಿ-ಮಂಗಳೂರು,ಭಾರತ್ ಸ್ಕೌಟ್, ಗೈಡ್ಡ್ಸ್, ಸ್ಥಳೀಯ ಸಂಸ್ಥೆ ಮಾಣಿ ಇವರ ಸಹಯೋಗ ದೊಂದಿಗೆ ಮಾಣಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಹೃದಯ ಮತ್ತು ಶ್ವಾಸಕೋಶವನ್ನು ಪುನಶ್ಚೇತನಗೊಳಿಸುವ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಾಣಿ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಗುರುಕುಲ ಕಲಾ ಪ್ರತಿಷ್ಠಾನದ ಅಧ್ಯಕ್ಷೆ
ಮಾನಸ ವಿಜಯ್ ಕೈಂತಜೆ ಸಹಕಾರ ನೀಡಿದ ಎಲ್ಲಾ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕರಾದ ಜೆ.ಪ್ರಹ್ಲಾದ ಶೆಟ್ಟಿ, ಆಯುಷ್ ವಿಭಾಗ ದ.ಕ.ದ ಇದರ ಹಿರಿಯ ವೈದ್ಯೆಡಾ. ಶೋಭಾರಾಣಿ ಉಪಸ್ಥಿತರಿದ್ದರು.
ಗುರುಕುಲ ಪ್ರತಿಷ್ಠಾನ ದ ಸಂಚಾಲಕರಾದ ಯು.ಆರ್.ಶೆಟ್ಟಿ ಸ್ವಾಗತಿಸಿ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ ವಂದಿಸಿದರು. ಅರ್ಚನಾ ಯಂ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಮಾಣಿಯ ಸಾರ್ವಜನಿಕರು,ಸ್ಥಳೀಯ ವಿದ್ಯಾಸಂಸ್ಥೆಗಳ ಶಿಕ್ಷಕರು,ಹಾಗೂ ಗ್ರಾಮ ಪಂಚಾಯಿತ್ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.














