ತುಂಬೆ :ಬಿ ಎ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಂಘ ಉದ್ಘಾಟನಾ ಸಮಾರಂಭ.

Coastal Bulletin
ತುಂಬೆ :ಬಿ ಎ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಂಘ ಉದ್ಘಾಟನಾ ಸಮಾರಂಭ.

ಬಂಟ್ವಾಳ :ಬಿ ಎ ತುಂಬೆ ವಿದ್ಯಾ ಸಂಸ್ಥೆಯಲ್ಲಿ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ನಡ ಸಂಘದ ಉದ್ಘಾಟನಾ ಸಮಾರಂಭವು ವಿದ್ಯಾಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯರು ಆಗಿರುವ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಕಾರ್ಯದರ್ಶಿಗಳೂ ಆಗಿರುವ ಶ್ರೀಯುತ ವಿ. ಸುಬ್ರಹ್ಮಣ್ಯ ಭಟ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಕನ್ನಡ ನಮ್ಮ ತಾಯಿ ಭಾಷೆ ಅದನ್ನು ಉಳಿಸಿ ಬೆಳೆಸಬೇಕಾದದ್ದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯವೂ ಹೌದು. ವಿದ್ಯಾಸಂಸ್ಥೆಯಲ್ಲಿ ಸದಾ ಕಾಲ ಕಾರ್ಯಚಟುವಟಿಕೆಯಿಂದ ಕೂಡಿರುವ ಕನ್ನಡ ಸಂಘದ ಸದಪಯೋಗವನ್ನು ವಿದ್ಯಾರ್ಥಿಗಳಾದ ನೀವು ಪಡೆದುಕೊಳ್ಳುವ ಮೂಲಕ ಕನ್ನಡವನ್ನು ಉಳಿಸುವ ಪ್ರಯತ್ನ ಆಗಬೇಕಾಗಿದೆ. ಆ ಮೂಲಕ ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದಕ್ಕೆ ಈ ರೀತಿಯ ಚಟವಟಿಕೆಗಳು ಸದಾ ಪ್ರೇರಕ ಎಂದು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಈ ವಿಶೇಷವಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದ್ಯಾಸಂಸ್ಥೆಯ ಕನ್ನಡ ಅಧ್ಯಾಪಕರಾದ ಶ್ರೀಯುತ ರಮೇಶ್ ಇವರು , ಈ ಇಡೀ ಜಗತ್ತನ್ನೇ ಗೆಲ್ಲಬಲ್ಲ ಪ್ರಬಲವಾದ ಸಾಧನಾ ಅಂತ ಒಂದಿದ್ದರೆ ಅದು ಶಿಕ್ಷಣ ಮಾತ್ರ ಅಂತಹ ಪ್ರಬಲವಾದ ಹಾಗೂ ಆಧುನಿಕ ಶಿಕ್ಷಣವನ್ನು ಪಡೆಯುವ ನೀವು ನಿಜಕ್ಕೂ ಧನ್ಯರು. ಪ್ರೀತಿಯ ವಿದ್ಯಾರ್ಥಿಗಳೇ ಶಿಕ್ಷಣ ಅಂದರೆ ಏನು ಅಥವಾ ವಿದ್ಯೆ ಅಂದ್ರೆ ಏನು ಅದು ನಾಲ್ಕು ಗೋಡೆಗಳ ಮಧ್ಯೆ ಬರೀ ಪುಸ್ತಕದ ಬರಹವನ್ನು ಮಸ್ತಕಕ್ಕೆ ಸೇರಿಸಿಕೊಳ್ಳುವುದು ಮಾತ್ರ ವಿದ್ಯೆ ಅಲ್ಲ. ಮುಂದೆ ಭವಿಷ್ಯದಲ್ಲಿ ನಮ್ಮ ಉಜ್ವಲವಾದ ಬದುಕನ್ನು ಕಟ್ಟಿಕೊಡುವಂತ, ಬದುಕಿಗೆ ದಾರಿ ದೀಪವಾಗಿಸುವಂತಹ ಶಿಕ್ಷಣವೇ ನಿಜವಾದ ಶಿಕ್ಷಣ. ಇಂತಹ ಶಿಕ್ಷಣವನ್ನು ಪಡೆಯುವುದಕ್ಕೆ ಇರುವ ಏಕೈಕ ದಾರಿ ಅಂದ್ರೆ ಅದು ನಮ್ಮ ವಿದ್ಯಾಸಂಸ್ಥೆಯಲ್ಲಿ ಸದಾ ಕಾರ್ಯಚಟುವಟಿಕೆಯಿಂದ ಕೂಡಿರುವ ಹಾಗೂ ವಿದ್ಯಾರ್ಥಿಗಳ ಏಳಿಗೆಗೆಂದೆ ಚಾಲ್ತಿಯಲ್ಲಿರುವ ಹಲವಾರು ಸಂಘಗಳಿಂದ ಮಾತ್ರ ಇದು ಸಾಧ್ಯ ಎಂದು ತಮ್ಮ ಅತಿಥಿ ಭಾಷಣದ ಮೂಲಕ ಹೇಳಿದರು.

ಹಾಗೆಯೇ ಕಾರ್ಯಕ್ರಮದಲ್ಲಿ ಹಿಂದಿ ಅಧ್ಯಾಪಕರಾದ ಶ್ರೀಯುತ ರಘುಪತಿ ಭಟ್

ಇವರು ಭಾಷೆ ಯಾವುದು ಎಂಬುದು ಮುಖ್ಯವಲ್ಲ ಅದನ್ನು ಪ್ರೀತಿಸಿ ಗೌರವಿಸುವ ಗುಣ ನಮ್ಮಲ್ಲಿದ್ದಾಗ ಆ ಭಾಷೆ ಸಹಜವಾಗಿ ತನ್ನಿಂದ ತಾನೆ ಬೆಳೆಯುತ್ತೆ ಬೆಳಗುತ್ತೆ ತನ್ಮೂಲಕ ನಮ್ಮನ್ನು ಬೆಳೆಸುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ವಿದ್ಯಾರ್ಥಿನಿಯರ ಕನ್ನಡದ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ನಂತರ ಜ್ಞಾನದ ಸಂಕೇತವಾದ ದೀಪವನ್ನು ಬೆಳಗಿಸುವುದರೊಂದಿಗೆ ವಿದ್ಯಾಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಶ್ರೀಯುತ ಪದ್ಮನಾಭ ಇವರ ಪ್ರಾಸ್ತಾವಿಕ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ದೊರೆಯಿತು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ವಿದ್ಯಾ ಕೆ ಮತ್ತು ಪ್ರಾಥಮಿಕ ವಿಭಾಗದ ಶಿಕ್ಷಕಿಯವರಾದ ಶ್ರೀಮತಿ ಶ್ವೇತಾ ಅದೇ ರೀತಿ ಪ್ರಯೋಗಾಲಯದ ಸಹಾಯಕರಾದ ಶ್ರೀಯುತ ಅಶೋಕ್ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಮಲ್ಲಿಕಾ ಶೆಟ್ಟಿಯವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹತ್ತನೆಯ ತರಗತಿಯ ಸಾತ್ವಿಕ ಕಾರ್ಯಕ್ರಮಕ್ಕೆ ಸ್ವಾಗತಿಸಿ ಹತ್ತನೆಯ ತರಗತಿಯ ಸಾನ್ವಿ ವಂದಿಸಿದರು. ಹತ್ತನೆಯ ತರಗತಿಯ ಮುಝೈನಾ ಸಮಾ ಕಾರ್ಯಕ್ರಮ ನಿರ್ವಹಿಸಿದರು.

Leave a Comment