Coastal Bulletin

ಬಂಟ್ವಾಳ: ಜೇಸಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷೆ ರಾಖಿ ಜೈನ್ ಬುಧವಾರ ಬಂಟ್ವಾಳಕ್ಕೆ ಭೇಟಿ ನೀಡಿದರು.ಬ್ರಹ್ಮರಕೂಟ್ಲು ಮೂಕಾಂಬಿಕಾ ಭಜನಾ ಮಂದಿರದ ಬಳಿ ಬಂಟ್ವಾಳ ಜೆಸಿಐ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಸ್ವಾಗತಿಸಿದರು.

ನಂತರ ಜೇಸಿಐ ಶಾಶ್ವತ ಯೋಜನೆಗಳಾದ ಕೊಡ್ಮಾಣ್ ಸತ್ಯಮ್ಮ ಮನೆಗೆ ನಿರ್ಮಿಸಲಾದ ನೀರಿನ ಟ್ಯಾಂಕ್ ಮತ್ತು ತೊಡಂಬಿಲದ ಸೆಕ್ರೆಡ್ ಹಾರ್ಟ್ ಚರ್ಚ್ ಬಳಿ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣವನ್ನು ರಾಖಿ ಜೈನ್ ಉದ್ಘಾಟಿಸಿದರು.

ಈ ಸಂದರ್ಭ  ಮಾತನಾಡಿ  ಜೇಸಿಐ ಬಂಟ್ವಾಳ ಸಮುದಾಯದ ಅಭಿವೃದ್ದಿಗಾಗಿ ಮಾಡಿರುವ ಯೋಜನೆಗಳೆಲ್ಲವೂ ಅತ್ಯುತ್ತಮವಾಗಿದೆ.‌ ಅಗತ್ಯ ಉಳ್ಳವರಿಗೆ ಮನೆ ನಿರ್ಮಾಣ, ಸಾರ್ವಜನಿಕರಿಗೆ ಬಸ್ಸು ತಂಗುದಾಣ ನಿರ್ಮಾಣ ಕಾರ್ಯ ಮೆಚ್ಚುವಂತದ್ದು. ಜನರು ಈ ಸೇವೆಯನ್ನು ಎಂದಿಗೂ ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಎಂದರು.ಈ ಸಂದರ್ಭ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸಹಕರಿಸಿದ ಜೇಸಿ ಸದಸ್ಯರನ್ನು ಸನ್ಮಾನಿಸಲಾಯಿತು. ಬಳಿಕ

ಜೇಸಿಐ ಬಂಟ್ವಾಳ ನಿಕಟಪೂರ್ವ ಅಧ್ಯಕ್ಷ ಸದಾನಂದ ಬಂಗೇರ ಅವರ ನೇತೃತ್ವದಲ್ಲಿ, ಸದಸ್ಯರ ಸಹಕಾರದಿಂದ ನಡೆದ ಏರ್ಯಬೀಡುವಿನ ಭತ್ತದ ಸಾಗುವಳಿಯನ್ನು ವೀಕ್ಷಿಸಿದರು.ಬಳಿಕ‌ ಕಳ್ಳಿಗೆ ಜಾರಂದಗುಡ್ಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಗಮಜ್ಜಿ ಮನೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಬಂಟ್ವಾಳ ಜೆಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ನಿಕಟಪೂರ್ವಾಧ್ಯಕ್ಷ ಸದಾನಂದ ಬಂಗೇರ, ಕಾರ್ಯದರ್ಶಿ ರೋಷನ್ ರೈ, ಕೋಶಾಧಿಕಾರಿ ರವೀಣ ಬಂಗೇರ, ಸ್ಥಾಪಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ಜೆಸಿರೆಟ್ ಅಧ್ಯಕ್ಷೆ ವಿದ್ಯಾ ಉಮೇಶ್, ವಲಯ ಉಪಾಧ್ಯಕ್ಷ ಶರತ್ ಕುಮಾರ್, ವಲಯ ಸಂಯೋಜಕ ಯತೀಶ್ ಕರ್ಕೆರಾ,ಸದಸ್ಯರು ಮತ್ತು ವಲಯಾಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Leave a Comment