ಪುಂಚಮೆ :ಆಸರೆ ಸೇವಾ ಫೌಂಡೇಶನ್ (ರಿ) ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

Coastal Bulletin
ಪುಂಚಮೆ :ಆಸರೆ ಸೇವಾ ಫೌಂಡೇಶನ್ (ರಿ) ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಬಂಟ್ವಾಳ :ಆಸರೆ ಸೇವಾ ಫೌಂಡೇಶನ್ ರಿ ಪುಂಚಮೆ ಇದರ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು 6ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕರಿಯಂಗಳ ಗ್ರಾಮದ ಪುಂಚಮೆಯ ಶ್ರೀ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು.

ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯ ಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ಸುಮಾರು 20 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಂಸ್ಥೆ ವತಿಯಿಂದ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಮಾತಾ ಎಜುಕೇಶನ್ ಕದ್ರಿ ಮಂಗಳೂರು ಇಲ್ಲಿಯ ಶಾಕಾ ಪ್ರಬಂಧಕರಾದ ಶೈಲೇಶ್ ಮತ್ತು ಬಂಟರ ಸಂಘ ಬಡಗಬೆಳೂರು ವಲಯದ ಅಧ್ಯಕ್ಷರಾದ ರಾಧಾಕೃಷ್ಣ ರೈ, ಸರ್ಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ಮುಖ್ಯೋಪಾಧ್ಯಾಯರಾದ ಸುಬ್ರಾಯ ಪೈ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧ ಲೋಕೇಶ್ , ಕೃಷಿಪತ್ತಿನ

ಸಹಕಾರ ಸಂಘದ ಉಪಾಧ್ಯಕ್ಷರಾದ ಗೋಪಾಲ್ ಅಂಚನ್ ಬಡಕಬೈಲ್ ಮತ್ತು ಸಭೆಯ ಅಧ್ಯಕ್ಷತೆ ಅಬುಸಾಲಿ ಪಂಚಮೆ ವಹಿಸಿದ್ದರು. ಸಂಸ್ಥೆಯ ಟ್ರಸ್ಟಿಗಳು ಹಾಗೂ ಸದಸ್ಯರು ಮತ್ತು ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು. ಆಸರೆ ಸೇವಾ ಫೌಂಡೇಶನ್ ಇದರ ಅಧ್ಯಕ್ಷರಾದ ಚಂದ್ರಹಾಸ್ ಪಲ್ಲಿಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಸಂಸ್ಥೆಯ ಗೌರವಾಧ್ಯಕ್ಷರಾದ ರಾಜು ಕೋಟ್ಯಾನ್ ಸ್ವಾಗತಿಸಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಗಾಣೆಮಾರ್ ಧನ್ಯವಾದ ಸಮರ್ಪಿಸಿದರು ಹಾಗೂ ಸಂಸ್ಥೆಯ ಸದಸ್ಯರಾದ ನವಾಜ್ ಬಡಕಬೈಲ್ ಕಾರ್ಯಕ್ರಮ ನಿರೂಪಿಸಿದರು.

Leave a Comment