ಬೆಂಜನಪದವು: ನರ್ಸಿಂಗ್‌ ವಿದ್ಯಾರ್ಥಿಗಳಿಂದ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ.

Coastal Bulletin
ಬೆಂಜನಪದವು: ನರ್ಸಿಂಗ್‌ ವಿದ್ಯಾರ್ಥಿಗಳಿಂದ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ.

ಬಂಟ್ವಾಳ:ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ಹಾಗೂ ಲಕ್ಷ್ಮಿ ಮೆಮೋರಿಯಲ್‌ ಕಾಲೇಜು ಆಫ್‌ ನರ್ಸಿಂಗ್‌ ಮಂಗಳೂರು ಇದರ ಎನ್‌ ಎಸ್‌ ಎಸ್‌ ಘಟಕದ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಮಾಜಮುಖಿ ಚಟುವಟಿಕೆಯ ಭಾಗವಾಗಿ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಂಜನಪದವು ಬಳಿಯ ರುದ್ರ ಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಅಮ್ಮುಂಜೆ ಗ್ರಾ ಪಂ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ಪಿ

ಡಿ ಒ ನಯನಾ,ಲಕ್ಷ್ಮಿ ಮೆಮೋರಿಯಲ್‌ ಕಾಲೇಜಿನ ಎಸ್‌ ಎಸ್‌ ಘಟಕದ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Comment