ಮಂಗಳೂರು :ಇಲ್ಲಿನ ಪಿವಿಸ್ ಬಳಿ ಮಾನಸ ಟವರ್ ನಲ್ಲಿರುವ ಪ್ರೇರಣಾ ಕಾಲೇಜಿನಲ್ಲಿ ಸಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೇರಣಾ ಕಾಲೇಜಿನ ಅಧ್ಯಕ್ಷರಾದ ಸುಧೀಶ್ ಪಿ ಕೆ. ಮಾತನಾಡಿ, ತುಳುನಾಡು ವೈವಿಧ್ಯತೆಯ ಬೀಡು, ಇಲ್ಲಿ ಆಚರಣೆ ಹಾಗೂ ಪದ್ಧತಿಗಳು ಪ್ರಪಂಚದದ್ಯಂತ ವಿಶೇಷ ಸ್ಥಾನಮಾನ ಹಾಗೂ ಮನ್ನಣೆ ಪಡೆದಿದೆ. ಆದರೆ ಈಗಿನ ಯುವ ಜನತೆ ಪಶ್ಚಾತ್ಯ ಸಂಸ್ಕೃತಿಗೆ ಒಲವು ತೋರಿಸುವುದು ತುಂಬಾ ವಿಷಾದನೀಯ, ಈ ನೆಲೆಯಲ್ಲಿ
ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೇರಣಾ ಕಾಲೇಜಿನ ಪ್ರಾಂಶುಪಾಲರಾದ ಅಶ್ವಥ್, ಅನಿಮಶನ್ ಮತ್ತು ವಿಶುವಲ್ ಎಫೆಕ್ಟ್ ವಿಭಾಗದ ನೋಯಲ್ ಜೀವನ್ ನಜರತ್, ಸಂಸ್ಥೆಯ ಹಿತೈಷಿ ಸಂಜೊತ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗೌತಮಿ ಸ್ವಾಗತಿಸಿ, ಸಾಯಿಜ್ಯೋತಿ ವಂದಿಸಿ, ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.















