ಕೇರಳದ ಖ್ಯಾತ ಚಿತ್ರಕಲಾವಿದ ಕೆ.ಎಂ ವಾಸುದೇವನ್ ನಂಬೂದಿರಿ ವಿಧಿವಶ

Coastal Bulletin
ಕೇರಳದ ಖ್ಯಾತ ಚಿತ್ರಕಲಾವಿದ ಕೆ.ಎಂ ವಾಸುದೇವನ್ ನಂಬೂದಿರಿ ವಿಧಿವಶ

ಮಲಪ್ಪುರಂ: ತಮ್ಮ ರೇಖಾಚಿತ್ರಗಳ ಮೂಲಕ ಮಲಯಾಳಂ ಸಾಹಿತ್ಯ ಲೋಕದ ಖ್ಯಾತ ಚಿತ್ರ ಕಲಾವಿದ ಕರುವಟ್ಟು ಮನ ವಾಸುದೇವನ್ ನಂಬೂದಿರಿ (97) ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರದಂದು ನಿಧಾನ ಹೊಂದಿದ್ದಾರೆ.

ಗುರುವಾರ ತಡರಾತ್ರಿ ನಂಬೂದರಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಅವರನ್ನು ನಡುವಟ್ಟಮ್‌ನಲ್ಲಿರುವ ಮನೆಯಿಂದ ಎಡಪಾಳ್ ಆಸ್ಪತ್ರೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕೋಟ್ಟಕ್ಕಲ್ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಡರಾತ್ರಿ 12.21ಕ್ಕೆ

ಚಿಕಿತ್ಸೆ ಫಲಕಾರಿಯಾಘದೇ ನಿಧನ ಹೊಂದಿರುವುದಾಗಿ ತಿಳಿದುಬಂದಿದೆ. 

ಇಂದು ಮಧ್ಯಾಹ್ನ 12 ಗಂಟೆಯಿಂದ ಎಡಪಲ್ ನಡುವಟ್ಟಂ ಮನೆಯಲ್ಲಿ ಮಧಾಹ್ನ 3 ಗಂಟೆಯವರೆಗೆ ತ್ರಿಶೂಲ್ ಲಲಿತಾಕಲಾ ಅಕಾಡೆಮಿ ಸಭಾಂಗಣದಲ್ಲಿ ಮೃತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5.30 ಕ್ಕೆ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 


Leave a Comment