Coastal Bulletin

ಬಂಟ್ವಾಳ: ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಶಾಲೆಯಲ್ಲಿ ಜೂನ್ 8ರಂದು ನಡೆಯಿತು.

ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಎಂಸಿ ಸದಸ್ಯರಾದ ಸೀತರಾಮ ಅಗೋಳಿಬೆಟ್ಟು, ದಿನಕರ, ಶ್ರೀನಾಥ್ ಶೆಟ್ಟಿ, ರವಿಪಂಬದ ನಳಿನಾಕ್ಷಿ, ಹಳೇ ವಿದ್ಯಾರ್ಥಿ, ಪತ್ರಕರ್ತ ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು.

614 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದ ತನುಶ್ರೀ,

ಮೊಹಮ್ಮದ್ ಸಾಹಿಲ್, ಅನುಷಾ, ಅಸ್‌ಫಿಯಾ, ಖತೀಜತುಲ್ ನಾಝೀಯಾ, ಆಯಿಷತ್ ರಾಝೀನಾ, ಆಶಿಕಾ, ಆಯಿಷತ್ ರಿಶಾನಾ ಅವರನ್ನು ಅಭಿನಂದಿಸಲಾಯಿತು.

ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲೆ ಜಯಲಕ್ಷ್ಮಿ ಪಿ.ಎನ್. ಪ್ರಾಸ್ತವಿಕವಾಗಿ ಮಾತನಾಡಿದರು. ಸಹಶಿಕ್ಷಕರಾದ ವೆಂಕಟ್ರಮಣ ಆಚಾರ್ಯ ಹಾಗೂ ಬಾಲಕೃಷ್ಣ ಶೆಟ್ಟಿ ಶುಭಾಶಂಸನೆಗೈದರು. ಆಲಿಸ್ ಪಾಸ್ ಸ್ವಾಗತಿಸಿದರು, ಗಣೇಶ್ ಬಿ. ವಂದಿಸಿದರು. ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.

Leave a Comment