Coastal Bulletin

ತಾಲೂಕು ಕಾನೂನು ಸೇವೆಗಳ ಸಮಿತಿ, ಬಂಟ್ವಾಳ,ವಕೀಲರ ಸಂಘ (ರಿ.).ಬಂಟ್ವಾಳ ವಲಯ ಅರಣ್ಯ ಇಲಾಖೆ, ಬಂಟ್ವಾಳ ಸರ್ಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆ, ಕೋಡಪದವು,ಗ್ರಾಮ ಅರಣ್ಯ ಸಮಿತಿ ವೀರಕಂಭ ಹಾಗೂ ಜನಪ್ರತಿನಿಧಿಗಳು ಕೋಡಪದವು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಹಾಗೂ ಬಿತ್ತೋತ್ಸವ ಕಾರ್ಯಕ್ರಮ ಜೂನ್ 07 ರಂದು ಮಂಗಳವಾರ ವೀರಕಂಭ ಬೊನ್ಯಕುಕ್ಕು ಎಂಬಲ್ಲಿ ನಡೆಯಿತು.

ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ ಎಮ್ ಎಫ್ ಸಿ ಬಂಟ್ವಾಳ, ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಭಾಗ್ಯಮ್ಮ, ಕಾರ್ಯಕ್ರಮ ಉದ್ಘಾಟಿಸಿ ದರು.

ಮುಖ್ಯ ಅತಿಥಿ ಬಂಟ್ವಾಳ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ ಎಮ್ ಎಫ್ ಸಿ ಬಂಟ್ವಾಳ, ಹಾಗೂ ತಾ.ಕಾ.ಸೇ.ಸ,ಸದಸ್ಯ ಕಾರ್ಯದರ್ಶಿ ಚಂದ್ರಶೇಖರ, ವೈ ತಳವಾರ, ಅವರು ಮಾತನಾಡಿ ಅರಣ್ಯ ಸಂರಕ್ಷಣೆಯ ಬಗ್ಗೆ ಅನೇಕ‌ ಕಾನೂನುಗಳು ಜಾರಿಗೆ ಬಂದಿದೆ.ನಾಡು ಉಳಿಬೇಕಾದರೆ ಪರಿಸರ ಸಂರಕ್ಷಣೆಯ ಅಗತ್ಯವಿದೆ.ಪ್ರಾಣಿ ಪಕ್ಷಿಗಳ ಸಂಕುಲಗಳ ಸಂರಕ್ಷಣಾ ದೃಷ್ಟಿಯಿಂದ ,ಹಾಗೂ ಪಕೃತಿಯ ವೈಪರೀತ್ಯಗಳು ಆಗದಂತೆ ತಡೆಯಲು ಪರಿಸರವನ್ನು ನಾವೆಲ್ಲರೂ ಜೊತೆಯಾಗಿ ಉಳಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

  ಈ‌ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆ ಎಮ್ ಎಫ್ ಸಿ ಬಂಟ್ವಾಳ,ಕೃಷ್ಣಮೂರ್ತಿಎನ್.ಬಂಟ್ವಾಳ ವಕೀಲರ ಸಂಘ ಅಧ್ಯಕ್ಷ

ಬಿ.ಗಣೇಶಾನಂದ ಸೋಮಯಾಜಿ, ವಿಟ್ಲ ಪಡ್ನೂರು ಗ್ರಾ.ಪಂ.ಅಧ್ಯಕ್ಷೆ ರೇಶ್ಮಾ ಶಂಕರಿ, ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಸಾದ್ ಶೆಟ್ಟಿ,ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಹರಿಣಿ ಕುಮಾರಿ ಡಿ. ಕೋಡಪದವು ಸರ್ಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಉಮ್ಮರ್ ಫಾರೂಕ್,ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್‌ ಬಳಿಗಾ‌ರ್, ಕೋಡಪದವು, ಸರ್ಕಾರಿ ಉನ್ನತೀಕರಿಸಿದ ಹಿ ಪ್ರಾ. ಶಾಲೆಯ ಮುಕ್ಯೋಪಾಧ್ಯಾಯಿನಿ ಮೋಹಲತ,ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಶ್ವನಾಥ ಎಂ. ಉಪವಲಯ ಅರಣ್ಯಾಧಿಕಾರಿ ಪ್ರೀತಂ, ಅರಣ್ಯ ವೀಕ್ಷಕರ ರಾದ ಶೋಭಿತ್, ದಯಾನಂದ, ಅನಿತಾ, ಅರಣ್ಯ ವಾಚರಿಗಳಾದ ಪ್ರವೀಣ್ , ಜಯರಾಮ ಉಪಸ್ಥಿತರಿದ್ದರು. ರಾಜೇಶ್ ಬಳಿಗಾರ್ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.

Leave a Comment