ಮಂಗಳೂರು :ಹೊೃಗೆಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಇದರ ವತಿಯಿಂದ ಆಗಸ್ಟ್ 04 ಆದಿತ್ಯವಾರ ಆಟಿಡೊಂಜಿ ದಿನ -2024 ಕಾರ್ಯಕ್ರಮ ಜರಗಿತು ಕಾರ್ಯಕ್ರಮವನ್ನು ಕಾರ್ಪೊರೇಟರ್ ಲತೀಫ್ ಕಂದಕ್ ಹಾಗೂ ಉಮೇಶ್ ಶೆಟ್ಟಿ ಪಟೇಲ್ ಹೌಸ್ ಉದ್ಘಾಟಿಸಿದರು ಅತಿಥಿಗಳಾಗಿ ಯತಿರಾಜ್, ಶೇಖರ್ ಸಾಲಿಯನ್, ಸುಕೇತ್ ರಾಜ್, ಶ್ರೀನಿವಾಸ್, ನಾಮದೇವ್, ಸಂಪತ್, ಅನ್ನು ಕಾಂಚನ್, ಶಶೀಂದ್ರ, ಮೋಹಿನಿ, ಉಪಸ್ಥಿತರಿದ್ದರು,
ನಂತರ ಆಟಿಯ ಕ್ರೀಡೆ ನಡೆಯಿತು ಗೋಣಿಚೀಲ ಓಟ, ಮೂರುಕಾಲಿನ ಓಟ, ಮಡಿಕೆ ಹೊಡೆಯುವುದು, ಸ್ಪೂನ್ ಅಂಡ್ ಲೆಮನ್, ತ್ರೊಬಾಲ್,ಹಗ್ಗ-ಜಗ್ಗಟ, ವಿವಿಧ ಸ್ಪರ್ಧೆಗಳು ನಡೆಯಿತು
ಊರಿನ ಮನೆಯವರು 28 ಬಗೆಯ ಆಟಿದ ತಿಂಡಿ ತಿನಿಸುಗಳನ್ನು ಮಾಡಿ ತಂದು
ಊರಿನ ಮಂದಿ ಎಲ್ಲರು ರುಚಿ ಸವಿದರು, ತಿಂಡಿ ತಿನಸು ಮಾಡಿ ತಂದವರಿಗೆ ತಂಡದ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು,
ಸಮಾರೋಪ ಸಮಾರಂಭದಲ್ಲಿ ಕ್ರೀಡೆಯಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಕಾರ್ಯಕ್ರಮವನ್ನು ಶ್ರೇಯಸ್ ಪಿಆರ್ ನಿರೂಪಿಸಿದರು.















