Coastal Bulletin

ತುಂಬೆ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏ.08 ರಂದು ಶುಕ್ರವಾರ ಬೆಳ್ಳಗೆ 10ಕ್ಕೆ ಸ್ವಚ್ಚತಾ ಸಪ್ತಾಹದ ಅಂಗವಾಗಿ "ಬಯಲು ಕಸಮುಕ್ತ ಗ್ರಾಮ" ಕಾರ್ಯಕ್ರಮ ನಡೆಯಿತು.

ತುಂಬೆ ಗ್ರಾಮ ಪಂಚಾಯತ್ ನ ಅಧ್ಯಕ್ಷರ ಪ್ರವೀಣ್ ಬಿ ತುಂಬೆ ಮಾತನಾಡಿ,ರಾಪ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕಗಳಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕಸವನ್ನು ತುಂಬಿ ಎಸೆಯುದರಿಂದ ದನ ಕರುಗಳು ಸೇವನೆ ಮಾಡುತ್ತವೆ.ಪ್ಲಾಸ್ಟಿಕ್ ಚೀಲದಲ್ಲಿರುವ ಆಹಾರದ ಜೊತೆಗೆ ವಿಷಕಾರಿ ವಸ್ತುಗಳು ಕಬ್ನಿಣ, ಪ್ಲಾಸ್ಟಿಕ್,ಗಾಜು ಚೂರುಗಳು ಪ್ರಾಣಿಗಳ ದೇಹ ಸೇರಿ ಪ್ರಾಣಿ ಪಕ್ಷಿ ಸಂಕುಳ ನಾಶವಾಗುವುದು. ಹಾಗೂ ಕೊಳಚೆ ನೀರನ್ನು ಚರಂಡಿಗೆ ಬಿಡುವುದರಿಂದ ಬಾವಿ ಕೆರೆಗಳು ನದಿಗಳಿಗೆ ಸೇರಿ ಮಲಿನಗೊಂಡು ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂದರು.

ಗ್ರಾಮದ ಜನತೆ ಸಮರ್ಪಕವಾಗಿ

ಕಸವಿಲೇವಾರಿ ಹಾಗೂ ಕೊಳಚೆ ನೀರನ್ನು ನಿರ್ವಹಿಸುವುದರಿಂದ ಶುದ್ದ ನೀರು, ಗಾಳಿ ರೋಗ ಮುಕ್ತ ಸಮಾಜದ ನಿರ್ಮಾಣ ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.

ಈ ಸಂದರ್ಭದಲ್ಲಿ ,ಪಂಚಾಯತ್ ಸದಸ್ಯ ಇಬ್ರಾಹಿಂ ವಳವೂರು ,ಜೆಸಿಂತಾ ಡಿ ಸೋಜಾ, ಎಂ ಕೆ ಖಾದರ್ ,ಝರೀನಾ, ವಾಲ್ಟರ್ ಲೋಬೊ ,ವನಿತ, ಆಶಾ ಕಾರ್ಯಕರ್ತೆ ಸುಮತಿ, ಅವಿನಾಶ್ ಲೋಕೆಶ್ ,ಪುರುಷೋತ್ತಮ, ಸಿಬ್ಬಂದಿ ವರ್ಗ, ಮತ್ತಿತರರು ಉಪಸ್ಥಿತರಿದ್ದರು.

ಲೆಕ್ಕ ಸಹಾಯಕಿ ಚಂದ್ರಾಕಲಾ .ಜಿ ಸ್ವಾಗತಿಸಿ, ಮೀನಾಕ್ಷಿ ಧನ್ಯವಾದವಿತ್ತರು.ಈ ಸಂದರ್ಭದಲ್ಲಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

Leave a Comment