ಲೊರೆಟ್ಟೊಪದವು :ಟೆಂಪೋ ಹಿಂದಕ್ಕೆ ಸರಿದು 3ರ ಹರೆಯದ ಮಗು ಸಾವು.

Coastal Bulletin
ಲೊರೆಟ್ಟೊಪದವು :ಟೆಂಪೋ ಹಿಂದಕ್ಕೆ ಸರಿದು 3ರ ಹರೆಯದ ಮಗು ಸಾವು.

ಬಂಟ್ವಾಳ: ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರರ ಹರೆಯದ ಮಗು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಲೊರೆಟ್ಟೊಪದವಿನಲ್ಲಿ ನ. 6ರಂದು ಬುಧವಾರ ಸಂಜೆ ನಡೆದಿದೆ.

ಫರಂಗಿಪೇಟೆ ಸಮೀಪದ 10ನೇ ಮೈಲಿಗಲ್ಲು ನಿವಾಸಿ ದಿ. ಉನೈಸ್ ಎಂಬವರ ಪುತ್ರಿ ಆಶಿಕ (3) ಮೃತ ಬಾಲಕಿ. ಉನೈಸ್‌ ಅವರ ಪತ್ನಿಯ ತಾಯಿ ಮನೆ ಬಂಟ್ವಾಳ ಸಮೀಪದ ಲೊರೆಟ್ಟೋಪದವಿನಲ್ಲಿದ್ದು, ಮಗು ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ

ಮನೆಯ ಮುಂಭಾಗ ದುರ್ಘಟನೆ ನಡೆದಿದೆ. ಅಂಗಳದಲ್ಲಿ ನಿಲ್ಲಿಸಿದ್ದ ಮಗುವಿನ ತಾಯಿಯ ಸಹೋದರನ ಟೆಂಪೋ ಏಕಾಏಕಿ ಹಿಂದಕ್ಕೆ ಬಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.ಗಂಭೀರ ಗಾಯಗೊಂಡ ಮಗುವನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆಯ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment