ನೇರಂಬೋಳು: ಆಹ್ವಾನಿತ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ.

Coastal Bulletin
ನೇರಂಬೋಳು: ಆಹ್ವಾನಿತ ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ.

ಬಂಟ್ವಾಳ :ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರಕ್ತೇಶ್ವರಿ ಯುವಕ ಸಂಘ(ರಿ )ನೇರಂಬೋಳು ಇದರ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಲೀಗ್ ಮಾದರಿಯ 30 ಗಜಗಳ ಕ್ರಿಕೆಟ್ ಪಂದ್ಯಾಟವು ಸಂಘದ ವಠಾರದಲ್ಲಿ ನಡೆಯಿತು.

ಈ ಪಂದ್ಯಾಟದ ಪ್ರಥಮ ಪ್ರಶಸ್ತಿಯನ್ನು ಎಫ್ ಜೆ ಕ್ರಿಕೆಟರ್ಸ್ ಜಕ್ರಿಬೆಟ್ಟು ತಂಡವು ಹಾಗೂ ದ್ವಿತೀಯ ಪ್ರಶಸ್ತಿಯನ್ನು ಸಿದ್ಧಿವಿನಾಯಕ ಕ್ರಿಕೆಟರ್ಸ್ ಬೋಳಂತೂರು ಇವರು ಪಡೆದುಕೊಂಡರು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜೈ ಹಿಂದ್ ಕ್ರಿಕೆಟರ್ಸ್ ಬಂಟ್ವಾಳ ಈ ತಂಡದ ಸಂಚಾಲಕರಾದ ಗಣೇಶ್ ಶೆಣೈ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗಣೇಶ್ ಪೂಜಾರಿ ವಹಿಸಿದ್ದರು ಜಕ್ರಿಬೆಟ್ಟು ಜೆ. ಡಿ ಸ್ಪೋರ್ಟ್ ನ ಮಾಲಕರಾದ

ಪ್ರಥ್ವಿ ಜೆ. ಡಿ ಮಾಜಿ ಸೈನಿಕರಾದ ನಾರಾಯಣ ಮೂಲ್ಯ ನೆರಂಭೋಳು ನಿಕಟ ಪೂರ್ವ ಗೌರವಾಧ್ಯಕ್ಷರಾದ ಮನೋಹರ್ ನೆರಂಬೋಳು ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಕುಲಾಲ್ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಪೂಜಾರಿ ಗೌರವ ಸಲಹೆಗಾರರಾದ ಚಂದ್ರಹಾಸ್ ಟೈಲರ್ ಕಾರ್ಯದರ್ಶಿ ಯಶೋಧರ ಪೂಜಾರಿ ಕಾರ್ಯಕ್ರಮ ಸಂಯೋಜಕರಾದ ಸಚಿನ್ ಕುಲಾಲ್ ಹಾಗೂ ಸಂಘದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು ರವೀಂದ್ರ ಕುಲಾಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Comment