ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ಇದರ ಮಹಾಸಭೆ ಮತ್ತು 2023-25 ಸಾಲಿನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮವನ್ನು ಬಂಟ್ವಾಳ ಮೇಘವರ್ಷ ಸ್ಟುಡಿಯೋ ಮಾಲಕರಾದ ದಯಾನಂದ ಬಂಟ್ವಾಳ ಉದ್ಘಾಟಿಸಿ ಶುಭ ಹಾರೈಸಿದರು.
ಚುನಾವಣಾ ಅಧಿಕಾರಿಯಾಗಿ ಮಹಾಬಲ ಮಾಸ್ಟರ್ ಸಹಕರಿಸಿದರು. ವೇದಿಕೆಯಲ್ಲಿ ಯುವ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಅಧ್ಯಕ್ಷರಾದ ಸಂತೋಷ್ ಮರ್ತಾಜೆ. ಕಾರ್ಯದರ್ಶಿ ನಿತೀಶ್ ಕುಲಾಲ್ ಪಲ್ಲಿಕಂಡ, ಗೌರವಾಧ್ಯಕ್ಷ ಮಾಧವ ಬಿ.ಸಿ.ರೋಡ್ ಉಪಸ್ಥಿತಿತರಿದ್ದರು. ಸಂತೋಷ್ ಮರ್ತಾಜೆ ಸ್ವಾಗತಿಸಿ, ಗತ ವರ್ಷಗಳ
ವರದಿ ಮತ್ತು ಲೆಕ್ಕಪತ್ರವನ್ನು ನಿತೀಶ್ ಕುಲಾಲ್ ಪಲ್ಲಿಕಂಡ ಮತ್ತು ಕಾರ್ತಿಕ್ ಮಯ್ಯರಬೈಲು ಸಭೆಯ ಮುಂದಿಟ್ಟರು.
ಈ ಸಂದರ್ಭದಲ್ಲಿ ಅಕ್ಟೋಬರ್ 8 ರಂದು ಬಿಸೀರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿರುವ ಯುವ ವೇದಿಕೆಯ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟದ ಪೋಸ್ಟರ್ ಬಿಡುಗಡೆ ಮಾಡಲಾಯಿತು.















