ಬಂಟ್ವಾಳ :ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀಕೃಷ್ಣ ಬಾಲಗೋಕುಲ ಸಮಿತಿ ಬೊಳ್ಳಾರಿ ಇದರ ಅಶ್ರಯದಲ್ಲಿ ಆಶೀರ್ವಾದ್ ಸೇವಾ ಸಂಘ ತುಂಬೆಯಲ್ಲಿ ಸೆ.6ರಂದು ಬಾಲಗೋಕುಲೋತ್ಸವ ಸಂಭ್ರಮದಿಂದ ನಡೆಯಿತು.
ಬಾಲಗೋಕುಲ ಉತ್ಸವದಲ್ಲಿ ಸುಮಾರು 40ಕ್ಕೂ ಅಧಿಕ ಪುಟಾಣಿಗಳು ಉತ್ಸಾಹ ಭಾಗವಹಿಸಿದರು. ಶ್ರೀಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಬಂದ ಮಕ್ಕಳು ಉತ್ಸವದಲ್ಲಿ ಅಭಿನಯ ಗೀತೆ, ಪ್ರಾರ್ಥನೆ, ಘೋಷಣೆ, ಶ್ಲೋಕಗಳನ್ನು ಹಾಡಿ ಸಂಭ್ರಮಿಸಿದರು.
ಬಾಲಗೋಕುಲದ ಮಾತಾಜಿಯರಾದ ಲತಾ ಶ್ರೀನಿವಾಸ್ ಬೊಳ್ಳಾರಿ, ಶ್ರುತಿ ರಾಕೇಶ್ ಬೊಳ್ಳಾರಿ, ಲಿಖಿತಾ ಬೊಳ್ಳಾರಿ ಮಾರ್ಗದರ್ಶನದಲ್ಲಿ
ನಡೆದ ಬಾಲಗೋಕುಲೋತ್ಸವದಲ್ಲಿ ಮಕ್ಕಳ ಹೆತ್ತವರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶ್ರೀಕೃಷ್ಣ ಬಾಲಗೋಕುಲ ಬೊಳ್ಳಾರಿ, ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘದ ವತಿಯಿಂದ ಮಾತಾಜಿ ಲತಾ ಶ್ರೀನಿವಾಸ್ ಬೊಳ್ಳಾರಿ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.















