ಕೊಡ್ಮಾಣ್: ಆ 16ರಂದು ಶ್ರೀ ಕೃಷ್ಣ ಜನ್ಮೋತ್ಸವ, ಮೊಸರು ಕುಡಿಕೆ ಉತ್ಸವ. ನೂತನ ಅಧ್ಯಕ್ಷರಾಗಿ ರವೀಂದ್ರ ನಾಯ್ಕ್ ಪೊನ್ನೋಡಿ ಆಯ್ಕೆ.

Coastal Bulletin
ಕೊಡ್ಮಾಣ್: ಆ 16ರಂದು ಶ್ರೀ ಕೃಷ್ಣ ಜನ್ಮೋತ್ಸವ, ಮೊಸರು ಕುಡಿಕೆ ಉತ್ಸವ. ನೂತನ ಅಧ್ಯಕ್ಷರಾಗಿ ರವೀಂದ್ರ ನಾಯ್ಕ್ ಪೊನ್ನೋಡಿ ಆಯ್ಕೆ.

ಬಂಟ್ವಾಳ :ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಕೊಡ್ಮಾಣ್ ಅಶ್ರಯದಲ್ಲಿ ನಡೆಯುವ ಮೊಸರು ಕುಡಿಕೆ ಶ್ರೀ ಕೃಷ್ಣ ಲೀಲೋತ್ಸವ ಆಚರಣೆಯ ಅಂಗವಾಗಿ ನೂತನ ಸಮಿತಿ ರಚನಾ ಸಭೆಯು ಜು 6ರಂದು ಆದಿತ್ಯವಾರ ಕೊಡ್ಮಾಣ್ ಶಾಲೆಯಲ್ಲಿ ನಡೆಯಿತು.

ಫರಂಗಿಪೇಟೆ ಶ್ರೀ ರಾಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಕೆ ಆರ್ ದೇವದಾಸ್ ಸಭೆಯನ್ನು ಉದ್ದೇಸಶಿಸಿ ಮಾತನಾಡಿ, ಶ್ರೀ ಕೃಷ್ಣ ಜನ್ಮೋತ್ಸವದಂತಹ ಧಾರ್ಮಿಕ ಆಚರಣೆಗಳಲ್ಲಿ ಸೇವೆ ಮಾಡುವ ಅವಕಾಶ ಸಿಗುವುದು ನಮ್ಮ ಸುಯೋಗ ಹಾಗೂ ಪುಣ್ಯದ ಕೆಲಸ. ಶ್ರೀ ಹರಿಯ ಪೂಜೆಯ ಮೂಲಕ ನಮ್ಮ ನೆಲದ ಧಾರ್ಮಿಕ ನಂಬಿಕೆಗಳನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗೋಣ, ಹಿಂದೂ ಸಮಾಜದ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೆ ತುಲುಪಿಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿ ಶುಭ ಹಾರೈಸಿದರು.


ವೇದಿಕೆಯಲ್ಲಿ ಮೇರಮಜಲು ಗ್ರಾ ಪಂ ಅಧ್ಯಕ್ಷರಾದ ಸತೀಶ ನಾಯ್ಗ ಕೊಡ್ಮಾಣ್ ಕೊಡಿ ಹಾಗೂ ಸದಸ್ಯರಾದ ಪದ್ಮನಾಭ

ಶೆಟ್ಟಿ ಕೊಟ್ಟಿಂಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಸಮಿತಿ ಯನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮೊಸರುಕುಡಿಕೆ ಶ್ರೀ ಕೃಷ್ಣ ಲೀಲೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರವೀಂದ್ರ ನಾಯ್ಕ್ ಪೊನ್ನೋಡಿ ಹಾಗೂ ಪ್ರ, ಕಾರ್ಯದರ್ಶಿಯಾಗಿ ಚರಣ್ ಕುಮಾರ್ ಕಲ್ಲಜಾಲ್, ಕೋಶಾಧಿಕಾರಿ ಪುರುಷೋತ್ತಮ ಆಳ್ವ ಹೊಯಿಗೆಗದ್ದೆ, ಕ್ರೀಡಾ ಕಾರ್ಯದರ್ಶಿ ಜೀವರಾಜ್ ಶೆಟ್ಟಿ ಪೊನ್ನೋಡಿ , ಮಾಧವ ಕಾಂಜಿಲಕೋಡಿ, ರತನ್ ಕಲ್ಲಜಾಲ್, ಸುದೇಶ್ ಕಾಂಜಿಲಕೋಡಿ ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 ಆ.03ರಂದು ಆದಿತ್ಯವಾರ ಆಹ್ವಾನಿತ ತಂಡಗಳ ಕ್ರೀಡೋತ್ಸವ ಮತ್ತು ಆ 16ನೇ ಶನಿವಾರ ಆದ್ದೂರಿಯಾಗಿ ಶ್ರೀ ಕೃಷ್ಣ ಜನ್ಮೋತ್ಸವ, ಮೊಸರು ಕುಡಿಕೆ ಉತ್ಸವ ನಡೆಸುವುದೆಂದು ತೀರ್ಮಾನಿಸಲಾಯಿತು.

Leave a Comment