Coastal Bulletin

ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಭಜನಾಮಂದಿರದಲ್ಲಿ ಶ್ರೀನಿತ್ಯಾನಂದ ಸ್ವಾಮಿಯವರ 31 ನೇ ವರ್ಷ ಹಾಗೂಶ್ರೀ ಸದ್ಗುರ ಗೋವಿಂದ ಸ್ವಾಮೀಜಿಯವರ 14ನೇ ವರ್ಷದ ವಿಗ್ರಹ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಜ.06ರಂದು ಶುಕ್ರವಾರ ನಡೆಯಿತು.

ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳ ಬಳಿಕ ಶ್ರೀ ಸ್ವಾಮೀಜಿಗಳ ವೊಗ್ರಹಕ್ಕೆ ಭಕ್ತರಿಂದ ಸೀಯಾಳಾಭಿಷೇಕ,ಭಜನೆ,ಅಲಂಕಾರ ಪೂಜೆ,ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆಯು ನಡೆಯಿತು.

ಸಂಜೆ ರಜತಪಲ್ಲಕಿಯಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯು ನಡೆಯಿತು. ನಿತ್ಯಾನಂದ ಭಜನಾಮಂದಿರದಿಂದ ಹೊರಟ ಮೆರವಣಿಗೆಯು ಬೈಪಾಸ್ ಜಂಕ್ಷನ್ ವರೆಗೆ ಸಾಗಿ ಶ್ರೀರಾಮಮಂದಿರದ

ಬಳಿ ತಿರುಗಿ ವಾಪಾಸ್ ಅದೇ ಮಾರ್ಗವಾಗಿ ಬಂದು ಹನುಮಾನ್ ದೇವಸದಥಾನದವರೆಗೆ ತೆರಳಿ ಅಲ್ಲಿಂದ ವಾಪಾಸ್ ಬಂದು ಮಂದಿರದ ಮುಂಭಾಗ ನೇತ್ರಾವತಿ ನದಿಕಿನಾರೆಯಲ್ಲಿ ಕಟ್ಟೆ ಪೂಜೆ ನಡೆಯಿತು.ವಿವಿಧ ಭಜನಾ ತಂಡ ಮೆರವಣಿಗೆಯಲ್ಲಿ ಸಾಗಿ ಬಂದವು.ಮಂದಿರದ ಆಡಳಿತ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

Leave a Comment