Coastal Bulletin

ಬಂಟ್ವಾಳ :ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿಸಿ ರೋಡಿನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಸಭಾಂಗಣದಲ್ಲಿ ಐದು ಪ್ರೌಢಶಾಲೆಗಳ ಇಂಟ್ರಾಕ್ಟ್ ಕ್ಲಬ್ಬಿನ ಪದಗ್ರಹಣ ಸಮಾರಂಭವು ಸೆ. 6ರಂದು ನಡೆಯಿತು.

ರೋಟರಿ ಜಿಲ್ಲಾ ಕಾರ್ಯದರ್ಶಿ ರೋ ಕೆ ಎನ್ ಹೆಗ್ಡೆ ಮತ್ತು ರೋಟರಿ ಅಧ್ಯಕ್ಷ ರೋ ಪಿ ಎಚ್ ಎಫ್ ಚಿತ್ತರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಪದಗ್ರಹಣ ಸಮಾರಂಭದಲ್ಲಿ , ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಡ ಶಾಲೆ ಶಂಭೂರು, ಸರಕಾರಿ ಪ್ರೌಢಶಾಲೆ ಅಜ್ಜಿಬೆಟ್ಟು,ಸರಕಾರಿ ಪ್ರೌಢಶಾಲೆ ಗೊಳ್ತ ಮಜಲ್,ಪದವಿ ಪೂರ್ವ ಕಾಲೇಜು ತುಂಬೆ, ಆಂಗ್ಲ ಮಾಧ್ಯಮ ತೌಹೀದ್ ಪ್ರೌಢಶಾಲೆ ಬಂಟ್ವಾಳ ಈ

ಎಲ್ಲಾ ಪ್ರೌಢಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅಬ್ಬಕ್ಕ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಪ್ರೊಫೆಸರ್ ತುಕಾರಾಂ ಪೂಜಾರಿ, ರೋಟರಿ ಕಾರ್ಯದರ್ಶಿ ರೋ ಉಮೇಶ್ ಆರ್ ಮೂಲ್ಯ, ರೋ ಕಿಶೋರ್ ಕುಮಾರ್, ರೋ ನಾರಾಯಣ್ ಪೆರ್ನೆ, ರೋ ಸವಿತ ಶೆಟ್ಟಿ, ರೋ ಹನೀಫ್ ಕೋಸ್ಟಲ್, ರೋ ಮನೋಜ್ ಕುಲಾಲ್, ಆನ್ಸ್ ಅಧ್ಯಕ್ಷೆ ವಿದ್ಯಾ ಉಮೇಶ್ ಮತ್ತು ಇಂಟ್ರಾಕ್ಟ್ ಕ್ಲಬ್ಬಿನ ಅಧ್ಯಕ್ಷರು ಕಾರ್ಯದರ್ಶಿ ಸದಸ್ಯರು ಮತ್ತು ಸಂಯೋಜಕರು ಮತ್ತಿತರರು ಉಪಸ್ಥಿತರಿದ್ದರು.

Leave a Comment