ಲಂಡನ್: ಭಾರೀ ಕುತೂಹಲ ಕೆರಳಿಸಿದ್ದ ಬ್ರಿಟನ್ ಪ್ರಧಾನಿ ಆಯ್ಕೆಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಳಿಯ ರಿಶಿ ಸುನಾಕ್ ಸೋಲೊಪ್ಪಿಕೊಂಡಿದ್ದು, ಪ್ರತಿಸ್ಪರ್ಧಿ ಲಿಜ್ ಟ್ರಸ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಆಂತರಿಕ ನಾಯಕತ್ವ ಸ್ಪರ್ಧೆಯಲ್ಲಿ ಗೆದ್ದ ನಂತರ ಲಿಜ್ ಟ್ರಸ್ ಅವರನ್ನು ಬ್ರಿಟನ್‌ನ ಮುಂದಿನ ಪ್ರಧಾನಿ ಎಂದು ಸೋಮವಾರ ಘೋಷಿಸಲಾಯಿತು. ಅವರ ಗೆಲುವಿನೊಂದಿಗೆ ಲಿಜ್ ಟ್ರಸ್ 2015ರ ಚುನಾವಣೆಯ ನಂತರ ಕನ್ಸರ್ವೇಟಿವ್ ಪಕ್ಷದಿಂದ ಪ್ರಧಾನಿ ಹುದ್ದೆಗೇರುತ್ತಿರುವ ನಾಲ್ಕನೇ ವ್ಯಕ್ತಿಯಾಗಿದ್ದಾರೆ.
ಈ
ಅವಧಿಯಲ್ಲಿ ಬ್ರಿಟನ್‌ನ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಎಂಬಂತಾಗಿದೆ. ದಿನ ದಿನಕ್ಕೂ ದೇಶದ ಬಿಕ್ಕಟ್ಟು ಹೆಚ್ಚುತ್ತಲೇ ಇದ್ದು, ಇದೀಗ ಜುಲೈನಲ್ಲಿ ಹಣದುಬ್ಬರ ರಾಕೆಟ್ ವೇಗದಲ್ಲಿ ಮೇಲೇರಿದ್ದು ಶೇ. 10.1ಕ್ಕೆ ಏರಿಕೆಯಾಗಿದೆ. ಇದರಿಂದ ಬ್ರಿಟನ್‌ನ ಜೀವನ ವೆಚ್ಚದ ಬಿಕ್ಕಟ್ಟು, ಕೈಗಾರಿಕೆಗಳ ಸಮಸ್ಯೆ, ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ.














