ಬಂಟ್ವಾಳ:ನಮ್ಮಲ್ಲಿರುವ ಸಂಪತ್ತು ಸದ್ವಿನಿಯೋಗವಾದರೆ ಮಾತ್ರ ಇಹ ಪರ ಲೋಕದಲ್ಲೂ ನೆಮ್ಮದಿ ಜೀವನ ಕಾಣಲು ಸಾಧ್ಯವಿದೆ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಪುದು ಗ್ರಾಮದ ಸುಜೀರು ದೈಯಡ್ಕ ಶ್ರೀ ರಕ್ತೇಶ್ವರೀ ಸಪರಿವಾರ ದೈವಗಳಿಗೆ ನಿರ್ಮಾಣಗೊಳ್ಳಲಿರುವ ನೂತನ ಸಾನಿಧ್ಯಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಉದ್ಯಮಿ ಐತಪ್ಪ ಆಳ್ವ ಸುಜೀರುಗುತ್ತು, ಪ್ರಮುಖರಾದ ನರೇಂದ್ರ ನಾಯ್ಕ ಸುಜೀರು ಬೀಡು, ರಾಮಚಂದ್ರ ಬಂಗೇರ, ಅರ್ಚಕ ಅನಂತ ಭಟ್ ಮಂಗಳಾದೇವಿ, ಪ್ರಕಾಶ್ಚಂದ್ರ ರೈ ದೇವಸ್ಯ, ಗಣೇಶ್ ಸುವರ್ಣ ತುಂಬೆ, ಚಂದ್ರಶೇಖರ ಗಾಂಭಿರ ಸುಜೀರುಗುತ್ತು, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ನಿವೃತ್ತ ಯೋಧ ದಾಮೋದರ ಸಪಲ್ಯ ಸುಜೀರು, ನವೀನ್ ಕುಮಾರ್ ಕೊಡ್ಮಾಣ್, ಶ್ರೀರಾಮ ಸೇನೆ
ಘಟಕ ಅಧ್ಯಕ್ಷ ಶಿವರಾಜ್, ಸುಂದರ ಗುರಿಕಾರ, ಮನೋಜ್ ಆಚಾರ್ಯ ನಾಣ್ಯ,ಪ್ರಮೋದ್ ಎಸ್. ಸುಜೀರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸುಜೀರು ಗುತ್ತು ಶುಭ ಹಾರೈಸಿದರು.
ಸಮಿತಿ ಕೋಶಾಧಿಕಾರಿ ಸುರೇಂದ್ರ ಕಂಬಳಿ ಸ್ವಾಗತಿಸಿ, ಗೌರವಾಧ್ಯಕ್ಷ ರವೀಂದ್ರ ಕಂಬಳಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ನಾಗೇಶ್ ಅಮೀನ್ ದತ್ತನಗರ ವಂದಿಸಿದರು. ಕಾರ್ಯದಶರ್ಿ ಗಣೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.















