ಬಂಟ್ವಾಳ :ಕ್ಯಾಂಪ್ಕೋ ಸಂಸ್ಥೆ , ಮಂಗಳೂರು ಇದರ ವತಿಯಿಂದ "ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ".ಎಂಬ ಯೋಜನೆಯಡಿಯಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ಜು.06ರಂದು ಗುರುವಾರ ಬಂಟ್ವಾಳ ತಾಲೂಕಿನ ಮಂಚಿ ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು.
ಕ್ಯಾಂಪ್ಕೋ ಸಂಸ್ಥೆಯ ಸಕ್ರೀಯ ಸದಸ್ಯರಾದ , ಬಂಟ್ಟಾಳ ತಾಲೂಕಿನ ಮಂಚಿ ಗ್ರಾಮದ ಶ್ರೀ ಮರಿ ಭಟ್, ಕಯೂರು ಇವರ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಗಾಗಿ ಕ್ಯಾಂಪ್ಕೋ ವತಿಯಿಂದ ನೀಡಲಾದ ರೂ. 50000/- ದ ಚೆಕ್ ನ್ನು ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಎಸ್ ಆರ್
ಸತೀಶ್ ಚಂದ್ರ ಇವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ , ಸದಸ್ಯರುಗಳಾದ ಶ್ರೀ ರಮೇಶ್ ರಾವ್ ಪಿ, ಶ್ರೀ ಗೋವಿಂದ ನಾಯಕ್,ಮಂಚಿ ಸೊಸೈಟಿಯ CEO ರಾದ ಶ್ರೀ ನಾರಾಯಣ ಪಿ, ಮಂಚಿ ಕ್ಯಾಂಪ್ಕೋ ಶಾಖಾಧಿಕಾರಿ ಶ್ರೀ ಶಿವಾನಂದ ಕಣ್ವತೀರ್ಥ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.















