Coastal Bulletin

ಮಂಗಳೂರು :ಶಿಕ್ಷಣದಲ್ಲಿ ಭಾರತೀಯ ಸಂಸೃತಿ ಮತ್ತು ಮೌಲ್ಯಗಳನ್ನು ಸದಾ ಆಚರಿಸಿ ಮೈಗೂಡಿಸಿಕೊಂಡು ಬೆಳೆಸುತ್ತಿರುವ ಮಾದರಿ ವಿದ್ಯಾಸಂಸ್ಥೆ ಸ್ವಸ್ತಿಕ ನ್ಯಾಶನಲ್ ಸ್ಕೂಲ್, ಉರ್ವಸ್ಟೋರ್, ಮಂಗಳೂರು ಇಲ್ಲಿನ ವಿದ್ಯಾರ್ಥಿಗಳು ಗುರುಪೂರ್ಣಿಮೆಯ ದಿನ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾಲೇಜಿನ ಪ್ರಾಂಶುಪಾಲೆ ಡಾ ಮಾಲಿನಿ ಎನ್ ಹೆಬ್ಟಾರ್ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ.ರಾಘವೇಂದ್ರ ಹೊಳ್ಳರು ಈ ಒಂದು ಸಂಸ್ಕೃತಿಯ ಇನ್ನು ಮುಂದೆಯೂ ನಮ್ಮ ಸಂಸ್ಥೆಯಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.

 ಎಲ್ಲಾ ವಿದ್ಯಾರ್ಥಿಗಳು

ಅಧ್ಯಾಪಕರ ಪಾದ ಪೂಜೆ ಮಾಡಿ ಅವರಿಂದ ಆಶೀರ್ವಾದ ಸ್ವೀಕರಿಸಿದರು. ವಿದ್ಯಾರ್ಥಿ ನಾಯಕಿ ಕು. ಚಿನ್ಮಯಿ ಸ್ವಾಗತಿಸಿದರು. ವಿದ್ಯಾರ್ಥಿ ಭುವನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾಲೇಜಿನ ಎಲ್ಲಾ ಭೋಧಕ , ಭೋಧಕೇತರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .

Leave a Comment