ಕಾಸರಗೋಡು: ಜಿಲ್ಲಾ ಕುಲಾಲ ಸಂಘದ 42 ನೇ ವಾರ್ಷಿಕೋತ್ಸವ ಹಾಗೂ ಮಹಾಸಭೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ.

Coastal Bulletin
ಕಾಸರಗೋಡು: ಜಿಲ್ಲಾ ಕುಲಾಲ ಸಂಘದ 42 ನೇ ವಾರ್ಷಿಕೋತ್ಸವ ಹಾಗೂ ಮಹಾಸಭೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ.

ಮಂಜೇಶ್ವರ : ಕಾಸರಗೋಡು ಜಿಲ್ಲಾ ಕುಲಾಲ ಸಂಘದ 42ನೇ ವಾರ್ಷಿಕೋತ್ಸವ ಹಾಗೂ ಮಹಾಸಭೆ ಮೇ 31 ಆದಿತ್ಯವಾರದಂದು ಜಿಲ್ಲಾ ಕುಲಾಲ ಸಮುದಾಯದ ಭವನ ತುಮಿನಾಡು, ಕುಂಜತ್ತೂರು ನಲ್ಲಿ ಜರಗಿತು .

ಬೆಳಗ್ಗೆ 7.30ರಿಂದ ಗಣಹೋಮ, ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ರಕ್ಷಿತಾ ತೂಮಿನಾಡು ಮತ್ತು ಭುವಿ ರವರ ಪ್ರಾಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು . ಅಧ್ಯಕ್ಷತೆಯನ್ನು ನಿವೃತ್ತ ಡೆಪ್ಯೂಟಿ ಕಮಾoಡೆಂಟ್ ಚಂದಪ್ಪ ಮೂಲ್ಯ ವಹಿಸಿದ್ದು, ದೀಪ ಪ್ರಜ್ವಲನೆ ಮತ್ತು ಉದ್ಘಾಟನೆ ಯನ್ನು ಕೇರಳ ಮಣ್ ಪಾತ್ರ ನಿರ್ಮಾಣ ಸಮುದಾಯದ ಸಭಾ (KMSS) ರಾಜ್ಯ ಅಧ್ಯಕ್ಷರಾದ ರಾಜೇಶ್ ಪಾಲಂಗಾಟ್ ನೇರ ವೆರಿಸಿದರು. ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್ ನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಾ.ಎo. ಪಿ. ವರ್ಷ ಮೈಸೂರು ಪ್ರಧಾನ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಕಮಲಾಕ್ಷಿ ವಿ. ಕುಲಾಲ್ ಉಪಾಧ್ಯಕ್ಷರು, ಮಂಜೇಶ್ವರ ಬ್ಲಾಕ್ ಪಂಚಾಯತ್, ಕೆ. ಭಾಸ್ಕರನ್, ರಾಜ್ಯ ಉಪಾಧ್ಯಕ್ಷರು KMSS, ಕೆ. ವಿಜಯನ್ ರಾಜ್ಯ ಕಾರ್ಯದರ್ಶಿ KMSS, ಕೆ. ಜಿತೇಶ್ ಕುಮಾರ್ ಕಾಸರಗೋಡು ಜಿಲ್ಲಾ ಅಧ್ಯಕ್ಷರು KMSS, ದಯಾನಂದ ಮುಜಂಗಾವು,ನಿವೃತ್ತ ಹಿರಿಯ ಸೂಪರಿಂಟೆಂಡೆಂಟ್, ರವೀಂದ್ರ ಸಾಲಿಯಾನ್ ಡಿಪೋಟ್ ಮ್ಯಾನೇಜರ್ KFCSC Ltd, ಸುಜಿತ್ ಕೊಂಚಾಡಿ,ಯುವ ಉದ್ಯಮಿ, ಶ್ರೀಮತಿ ಚಂಚಲಾ ಎ ಕೃಷಿ ಅಧಿಕಾರಿ ಮೀoಜ, ಕೊರಗಪ್ಪ ಜೆ. ಬಂಜನ್ ಉದ್ಯಮಿ ಬರೋಡ, ಹೂವಯ್ಯ ನೂಜಿ ಟ್ರಸ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಕಡoಗಲ್ಲಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ನೂಜಿ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಿಲ್ಲಾ ಕುಲಾಲ ಸಮುದಾಯದ ಭವನ ಕಟ್ಟಡ ಸಮಿತಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಪದವು ಹಾಗೂ 10 ಕುಲಾಲ ಪಂಚಾಯತ್ ಶಾಖೆಗಳ ಅಧ್ಯಕ್ಷರು ಗೌರವ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ವ್ಯಾಪ್ತಿಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾಸರಗೋಡು ಜಿಲ್ಲಾ ಕುಲಾಲ ಸಾಧಕ ಪ್ರಶಸ್ತಿ 2026 ರನ್ನು ಪ್ರಧಾನ ಮಾಡಲಾಯಿತು. ಪ್ರಗತಿಪರ ಕೃಷಿಕರಾದ ಶ್ರೀಮತಿ ಸೇಸಮ್ಮ ನಾರಾಯಣ ಮೂಲ್ಯ ಮುನ್ನಿಪ್ಪಾಡಿ, ಶ್ರೀನಿವಾಸ ಮೂಲ್ಯ ಹೇರೂರು, ಕೆ. ಸೀತಾರಾಮ ಕುಲಾಲ್ ಕಣ್ವತೀರ್ಥ,ಯುವ ಕೃಷಿ ಕ ರಾದ ರಾಮ ತುಳುವನ ಉಪ್ಪಿನೆ, ಶಿಕ್ಷಣ ರಂಗದಲ್ಲಿ ಶ್ರೀಮತಿ ಲೀಲಾ ಟೀಚರ್ ಪೆರ್ಮುದೆ, ಕೃಷ್ಣ ಎನ್ ನೆಲ್ಲಿಕಳಯ, ಸಹಕಾರಿ ಕ್ಷೇತ್ರದಲ್ಲಿ ರಾಮಚಂದ್ರ ಬಡಾಜೆ, ಮಿಲಿಟರಿ ಸೇವೆಗಾಗಿ ಮೋಹನ ಕಡಂಬಾರು, ಕಂಬಳ ಕ್ಷೇತ್ರದಲ್ಲಿ ಚಂದ್ರ ಹಾಸ ಅಡಕಳ, ಪತ್ರಿಕಾ ಮಾಧ್ಯಮದಲ್ಲಿ ಸತೀಶ್ ದೈಗೋಳಿ, ಪಿಹೆಚ್ ಡಿ ಪುರಸ್ಕೃತರು ಸಂಶೋಧಕರು ಡಾ. ಆನಂದ ಎಂ ಕಿದೂರು, ಯಕ್ಷಗಾನ ರಂಗದಲ್ಲಿ ಸಂದೀಪ್ ಕೋಳ್ಯೂರು, ಕಲಾ ರಂಗದಲ್ಲಿ

ಚಂದ್ರಶೇಖರ್ ಸಾಯ ಬೇಡಗುಡ್ಡೆ, ಮಾ. ಸುದೀಪ್ ಮಿಯಾಪದವು, ಕ್ರೀಡಾ ಕ್ಷೇತ್ರದಲ್ಲಿ ಕು. ನಮಿತಾ ಕೆ. ಜಿ ರವರನ್ನು ಸನ್ಮಾನಿಸಲಾಯಿತು.ಸನ್ಮಾನ ಪತ್ರ ವನ್ನು ವಿದ್ಯಾರ್ಥಿನಿಯರಾದ ಸ್ವಾತಿ ತೂಮಿನಾಡು, ವರ್ಷ ಎಂ, ಭುವಿ, ಜೀಕ್ಷಾ ಕಳತ್ತೂರು, ರಶ್ಮಿತಾ, ಶರಣ್ಯ, ಯಶಸ್ವಿನಿ, ಪ್ರಜ್ಞ ವಾಚಿಸಿದರು.ಜಿಲ್ಲಾ ಸಂಘದ ಆಶ್ರಯದಲ್ಲಿ ಚಿಕಿತ್ಸೆಗಾಗಿ ನೀಡುವ ಕುಲಾಲ ಆಸರೆ ಸೇವಾ ಸಹಾಯ ಹಸ್ತದ 15ನೇ ಯೋಜನೆಯ ಚೆಕ್ ನ್ನು ಎಣ್ಮಕಜೆ ಪಂಚಾಯತ್ ನ ಪರ್ಪ ಕರಿಯದ ಸತೀಶ್ ಕುಲಾಲ್ ರವರಿಗೆ ಹಾಗೂ 16 ನೇ ಯೋಜನೆಯ ಚೆಕ್ ನ್ನು ವರ್ಕಾಡಿ ಪಂಚಾಯತ್ ನ ಆಸನಬೈಲ್ ನ ಮಾಧವ ಕುಲಾಲ್ ರವರಿಗೆ ಹಸ್ತಾಂತರಿಸಲಾಯಿತು. 2025 ರ ಸಾಲಿನಲ್ಲಿ ಕೇರಳ ತ್ರಿಸ್ತರ ಚುನಾವಣೆಯಲ್ಲಿ ವಿಜೇತರಾದ ಕುಲಾಲ ಸಮಾಜದ ಬಂಧುಗಳಾದ ಶ್ರೀಮತಿ ಕಮಲಾಕ್ಷಿ ವಿ. ಕುಲಾಲ್ ವರ್ಕಾಡಿ ಉಪಾಧ್ಯಕ್ಷರು ಮಂಜೇಶ್ವರ ಬ್ಲಾಕ್ ಪಂಚಾಯತ್ ,ಶ್ರೀಮತಿ ಶಾಂತಾಕುಮಾರಿ ಬೋಳಂತಕೋಡಿ ಮೀoಜ ,ಲತೇಶ್ ಕೆ ಮಜಿಬೈಲ್ ಮೀoಜ , ಗೋಪಾಲಕೃಷ್ಣ ಪಜ್ವ ವರ್ಕಾಡಿ,ಶ್ರೀಮತಿ ಮಾಲತಿ ಕೆ ವರ್ಕಾಡಿ, ಶ್ರೀಮತಿ ಗಾಯತ್ರಿ ರವೀಂದ್ರ ಕಾಯರಡ್ಕ ವರ್ಕಾಡಿ, ಚಂದ್ರಶೇಖರ ಗುಡ್ಡಲಕೋಡಿ ವರ್ಕಾಡಿ, ಐತಪ್ಪ ಕುಲಾಲ್ ನಲ್ಕ ಎಣ್ಮಕಜೆ, ಶ್ರೀಮತಿ ವಿಜಯ ಕುಲಾಲ್ ಎಣ್ಮಕಜೆ , ಜಗದೀಶ್ ಎಣ್ಮಕಜೆ ,ಶ್ರೀಮತಿ ಪುಷ್ಪ ಲತಾ ಪುತ್ತಿಗೆ, ಮಹೇಶ್ ಅಜ್ಜಿ ಮೂಲೆ ಕುಂಬ್ದಾಜೆ, ಶ್ರೀಮತಿ ಸೀತಾ ಭಾಸ್ಕರ್ ತಚ್ಚಣಿ ಉಪಾಧ್ಯಕ್ಷರು ತಲಪಾಡಿ ಗ್ರಾಮ ಪಂಚಾಯತ್ ರವರುಗಳಿಗೆ ಗೌರವಾರ್ಪಣೆ ನಡೆಯಿತು.ಕಾಸರಗೋಡು ಜಿಲ್ಲಾ ವ್ಯಾಪ್ತಿಯ 2025-26ರ ಸಾಲಿನ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿ ಸಿರುವ ಒಟ್ಟು 44 ವಿದ್ಯಾರ್ಥಿಗಳಲ್ಲಿ, ಕೇರಳ ಎಸ್.ಎಸ್. ಎಲ್. ಸಿಯ 14,ಕರ್ನಾಟಕ ಎಸ್.ಎಸ್. ಎಲ್. ಸಿಯ 6,ಕೇರಳ /ಕರ್ನಾಟಕ ಸಿ.ಬಿ. ಯಸ್.ಇ ಯ 5, ಕೇರಳ /ಕರ್ನಾಟಕದ ಪ್ಲಸ್ ಟು ಮತ್ತು ಪಿ. ಯು. ಸಿ ವಿಭಾಗದ 19 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿ ಸಲಾಯಿತು.ಕಾಸರಗೋಡು ಜಿಲ್ಲಾ ವ್ಯಾಪ್ತಿಯ ಸುಮಾರು 400 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಮುನ್ನಿಪ್ಪಾಡಿ ನ್ಯಾಯವಾದಿ ಸ್ವಾಗತಿಸಿ ಪ್ರಸ್ತಾವನೆ ಮಾಡಿದರು. ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ದಾಮೋದರ ಮಾಸ್ಟರ್ ಕಬ್ಬಿನಹಿತ್ತಿಲು ಧನ್ಯವಾದ ಸಮರ್ಪಿಸಿ, ಶ್ರೀ ನವೀನ್ ಚಿಪ್ಪಾರ್ ಕಾರ್ಯಕ್ರಮ ನಿರೂಪಿಸಿದರು.

ಸಹಭೋಜನ ನಂತರ ಕುಲಾಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 42ನೇ ವಾರ್ಷಿಕ ಮಹಾಸಭೆ ಜರಗಿತು.

Leave a Comment