ಬೆಂಗಳೂರು ರಸ್ತೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ: ಸಿಎಂ

Coastal Bulletin
ಬೆಂಗಳೂರು ರಸ್ತೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ: ಸಿಎಂ

ಬೆಂಗಳೂರು: ನಗರದ ರಸ್ತೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ನೂತನ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಬಳಿಕ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಬೆಂಗಳೂರು ನಗರ ರಸ್ತೆ ಅಭಿವೃದ್ಧಿಗೆ ಡಾಂಬರೀಕರಣ ಮಾಡಲು 2 ಸಾವಿರ ಕೋಟಿ ಅನುದಾನ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ

ಎಂದು ತಿಳಿಸಿದರು.

ಈಗ ನಡೆಯುತ್ತಿರುವ ಕೆಲಸ ಬಿಟ್ಟು ಹೊಸ ರಸ್ತೆಗೆ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲಾಗುವುದು. 3-4 ತಿಂಗಳಲ್ಲಿ ಇದನ್ನ ಮಾಡ್ತೀವಿ ಎಂದರು.

ಬೆಂಗಳೂರು ಕಸ ತೆಗೆಯೋಕೂ ಚಾಲೆಂಜ್ ಬಂತು. ರೈತರ ಸಮಸ್ಯೆಗೆ ನಮ್ಮ ಆದ್ಯತೆ. ಎಲ್ಲರನ್ನು ಕರೆದು ಮಾತಾಡಿ ನಿರ್ಧಾರ ಮಾಡ್ತೀವಿ. ರೈತನಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಹೇಳಿದರು.

Leave a Comment