ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇವಶ್ಯ ಮುಡೂರು ಸರಕಾರಿ ಉಚಿತ ಶಾಲೆಗೆ ಪುಸ್ತಕ ವಿತರಣೆ.

Coastal Bulletin
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇವಶ್ಯ ಮುಡೂರು ಸರಕಾರಿ ಉಚಿತ ಶಾಲೆಗೆ ಪುಸ್ತಕ ವಿತರಣೆ.

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ದೇವಶ್ಯ ಮುಡೂರು ಇದರ 2026-27 ನೇ ಸಾಲಿನ ಶಾಲಾ ಪ್ರಾರಂಭ ಉತ್ಸವ ಕಾರ್ಯಕ್ರಮ ಶಾಲಾ ಮಕ್ಕಳ ವಿಶೇಷ ರೀತಿಯ ಮೆರವಣಿಗೆ, ವೇಷ ಭೂಷಣಗಳೊಂದಿಗೆ ಮತ್ತು ಸಿಹಿ ತಿಂಡಿ ವಿತರಣೆ ಮಾಡುವುದರೊಂದಿಗೆ ಅದ್ದೂರಿಯಾಗಿ ನಡೆದಿದ್ದು ಶಾಲಾ ಪ್ರಾರಂಭ ದಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ವತಿಯಿಂದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಟ್ರಸ್ಟ್ ನ ಸಂಚಾಲಕ ಅರ್ಜುನ್ ಭಂಡಾರ್ಕರ್ ಪುಸ್ತಕ ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರು, ಉಪಾಧ್ಯಕ್ಷ ಪ್ರಮೀಳಾ, ಹಳೆ

ವಿದ್ಯಾರ್ಥಿ ಸಂಘ ಅಧ್ಯಕ್ಷ ಯಶವಂತ, ಸಾಹಿತಿ ನಾಡಮಣಿ, ಮುಖ್ಯ ಶಿಕ್ಷಕಿ ವಿಲ್ಮಾ, ಪ್ರಮುಖರಾದ ರಾಮಕೃಷ್ಣ ಮಯ್ಯ,ಸಹ ಶಿಕ್ಷಕಿಯಾರು ಹಾಗೂ ಮಕ್ಕಳ ಪೋಷಕರು, ಹೆತ್ತವರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Comment