ಬಂಟ್ವಾಳ :ಸೇವಾಂಜಲಿಯ ಬಹಳಷ್ಟು ಸಮಾಜಮುಖಿ ಸೇವೆಗಳಲ್ಲಿ ಕ್ಷಯ ರೋಗಿಗಳಿಗೆ ಕಿಟ್ ವಿತರಣೆ ವಿಶೇಷವಾದ ಮಾನವೀಯ ಕಾರ್ಯ, ಸರಕಾರ ಮಾಡಬೇಕಾದ ಕೆಲಸವನ್ನು ಸೇವಾಂಜಲಿ ಸಂಸ್ಥೆ ಎಲೆ ಮರೆಯ ಕಾಯಿಯಂತೆ ಮಾಡುತ್ತಿದೆ, ಕ್ಷಯ ಮುಕ್ತ ಭಾರತಕ್ಕಾಗಿ ಕೃಷ್ಣ ಕುಮಾರ್ ಪೂಂಜರ ತಂಡ ಅಳಿಲು ಸೇವೆ ಮಾಡುತ್ತಿರುವುದ್ದು,ಸರಕಾರದ ಯೋಜನೆಯನ್ನು ಸಮಾಜದ ಜನತೆಗೆ ತಲುಪಿಸುವ ಸೇವಾಂಜಲಿಯ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಹೇಳಿದರು.
ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೂ 5ರಂದು ಶುಕ್ರವಾರ ಕ್ಷಯ ರೋಗಿಗಳಿಗೆ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿ ಶುಭ ಸಮೂಹ ಸಂಸ್ಥೆಯ ಮಾಲಕರದ ಭುವನೇಶ್ ಪಚ್ಚಿನಡ್ಕ ಶುಭ ಹಾರೈಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿ ಕೆಮ್ಮು ಮೊದಲಾದ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆ ನಡೆಸಿ ಔಷಧಿಯೊಂದಿಗೆ ಪೌಷ್ಟಿಕಾಹಾರ ಸೇವಿಸಿದಾಗ ರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಪ್ರಧಾನಿಯವರ ಕನಸಾದ
ಟಿ ಬಿ ಮುಕ್ತ ಭಾರತ ಆಶಯವನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ವಿವಿಧ ತಾಲೂಕಿನ ಕ್ಷಯ ರೋಗಿಗಳನ್ನು ಗುರುತಿಸಿ ಪೌಷ್ಟಿಕಾಹಾರದ ಕಿಟ್ ನೀಡಲಾಗಿದೆ. ಇದು 45ನೇ ತಿಂಗಳ ಕಾರ್ಯಕ್ರಮವಾಗಿದ್ದು ಈವರೆರೆ 230 ಮಂದಿ ಕ್ಷಯರೋಗಿಗಳಿಗೆ 1000ಸಾವಿರ ರೂ ಮೌಲ್ಯದ ದವಸ ಧಾನ್ಯ ವಿತರಿಸಲಾಗಿದ್ದು ದಾನಿಗಳ ಸಹಕಾರದಿಂದ 15 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು.
ಪ್ರಮುಖರಾದ ಸುರೇಶ್ ರೈ ಪೆಲಪಾಡಿ, ಚಂದ್ರಹಾಸ ಕಡೆಗೋಳಿ, ವಿಕ್ರಂ ಫರಂಗಿಪೇಟೆ,ಪ್ರಶಾಂತ್ ತುಂಬೆ, ಸುನೀಲ್ ಕುಮ್ಡೆಲ್, ಹರೀಶ್ ಕುಮಾರ್ ಕಡೆಗೋಳಿ , ಪದ್ಮನಾಭ ಕಿದೆಬೆಟ್ಟು, ಪ್ರಭಾಕರ ರಾಮಲ್ ಕಟ್ಟೆ, ಉಮಾ ಚಂದ್ರಶೇಖರ್, ಶಿವರಾಜ್ ಸುಜೀರು, ನಾರಾಯಣ ಬಡ್ಡುರು ಹಾಗೂ ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.ಸೇವಾಂಜಲಿಯ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.















