ದರಿಬಾಗಿಲು:ಸಾಮಾಜಿಕ ಮುಂದಾಳು ಚಿದಾನಂದ ಸಾಲಿಯಾನ್ ನಿಧನ

Coastal Bulletin
ದರಿಬಾಗಿಲು:ಸಾಮಾಜಿಕ ಮುಂದಾಳು ಚಿದಾನಂದ ಸಾಲಿಯಾನ್ ನಿಧನ

ಬಂಟ್ವಾಳ: ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಸಾಮಾಜಿಕ ಧಾರ್ಮಿಕ ಮುಂದಾಳು ದರಿಬಾಗಿಲು ಚಿದಾನಂದ ಸಾಲಿಯಾನ್(56) ಅವರು ಅನಾರೋಗ್ಯದಿಂದ ಜೂನ್ 4ರಂದು ಮುಂಜಾನೆ ಮಂಗಳೂರು ಕೆ.ಎಂ. ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಕಳ್ಳಿಗೆ ದೇವoದಬೆಟ್ಟು ಶ್ರೀಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಕಾರ್ಯದರ್ಶಿಯಾಗಿ, ಶ್ರೀ ಮುಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ  ಉಪಾಧ್ಯಕ್ಷರಾಗಿ , ಶ್ರೀ ಶಾರದಾ ಪ್ರತಿಷ್ಠಾನ ದೇವoದ ಬೆಟ್ಟು,ಇದರ ಕಾರ್ಯದರ್ಶಿಯಾಗಿ. ಬಿ .ಎನ್.ಸಿ ಕ್ರಿಕೆಟಸ್

ಇದರ ಸ್ಥಾಪಕ ಅಧ್ಯಕ್ಷರಾಗಿ, ಹಾಗೂ ಸ್ಥಳೀಯ ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡು ಜವಾಬ್ದಾರಿಯನ್ನು ನಿರ್ವಹಿಸಿದ್ದರು, ಇವರು ಜನ ಸೇವೆಯಲ್ಲಿ ಅಪಾರ ಕಾಳಜಿ  ಮತ್ತು ಬದ್ಧತೆ ಹೊಂದಿದ್ದರು. ಪತ್ನಿ, ಮಗಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

Leave a Comment