ಬಂಟ್ವಾಳ: ರಾಜ್ಯ ಸರ್ಕಾರದ ಪಾಲು ಬಂಡವಾಳ ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇದರ "ಮುಂಗಾರು ಹಂಗಾಮ" ಎಂಬ ಮಳೆಗಾಲದ ಠೇವಣಿಗೆ ಹಾಗೂ ಚಿನ್ನಾಭರಣ ಸಾಲಕ್ಕೆ ಹೊಸ ಆಫರ್ ನೀಡಲಾಗಿದ್ದು, ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮವು ಫರಂಗಿಪೇಟೆ ಶಾಖೆಯಲ್ಲಿ ಜೂನ್ 4ರಂದು ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಫರಂಗಿಪೇಟೆ ಅಥಾಯಿ ಕಾಂಪ್ಲೆಕ್ಸ್ ಮಾಲಕ ಮಹಮ್ಮದ್ ಇಕ್ಬಾಲ್, ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ನಿರ್ದೇಶಕ ಶೇಷಪ್ಪ ಕುಲಾಲ್, ಅಂಬಾರಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ ಮುರಳೀಧರ ಕರ್ಕೇರ, ಗ್ರಾಹಕರಾದ ದಾವೂದ್ ಹಕೀಮ್, ಸುಮನ್ ರಾಜ್, ಶೈಲಜಾ, ಫರಂಗಿಪೇಟೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ವ್ಯವಸ್ಥಾಪಕ ಹರೀಶ್ ಕೆ, ಸಿಬ್ಬಂದಿ
ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.
ಮಳೆಗಾಲದ ವಿಶೇಷ ಆಫರ್:
ಒಂದು ವರ್ಷದ ನಿರಖು ಠೇವಣಿಗೆ 10 ಶೇಕಡ ಬಡ್ಡಿ ಹಾಗೂ ಚಿನ್ನಾಭರಣ ಪ್ರತಿ ಗ್ರಾಂ ಗೆ 7777ರಷ್ಟು ಗರಿಷ್ಠ ಸಾಲ ಸೌಲಭ್ಯ,100 ಕ್ಕೆ ಕೇವಲ 85 ಪೈಸೆ ಕನಿಷ್ಠ ಬಡ್ಡಿಯ ಮಾತ್ರ. ಇದು ಗರಿಷ್ಠ ಸಾಲ -ಕನಿಷ್ಠ ಬಡ್ಡಿ ದರದ ಆಫರ್ ಆಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.














