ನೇರಂಬೋಳು: ರಕೇಶ್ವರಿ ಯುವಕ ಸಂಘ (ರಿ) ರಜತ ಸಂಭ್ರಮಕ್ಕೆ ಅದ್ದೂರಿ ಚಾಲನೆ, ಸಭಾ ಕಾರ್ಯಕ್ರಮ ಸಾಧಕರಿಗೆ ಸನ್ಮಾನ.

Coastal Bulletin
ನೇರಂಬೋಳು: ರಕೇಶ್ವರಿ ಯುವಕ ಸಂಘ (ರಿ) ರಜತ ಸಂಭ್ರಮಕ್ಕೆ ಅದ್ದೂರಿ ಚಾಲನೆ, ಸಭಾ ಕಾರ್ಯಕ್ರಮ ಸಾಧಕರಿಗೆ ಸನ್ಮಾನ.

ಬಂಟ್ವಾಳ ಶ್ರೀ ರಕೇಶ್ವರಿ ಯುವಕ ಸಂಘ (ರಿ.), ನೇರಂಬೋಳು ಇದರ ರಜತ ಸಂಭ್ರಮಕ್ಕೆ ಜೈ ತುಲುನಾಡ್ (ರಿ.) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಿಕ್ಷಕಿ ಪೂರ್ಣಿಮಾ ಬಂಟ್ವಾಳ ತುಳುನಾಡ ಬಾವುಟ ಹಾರಿಸುವ ಮೂಲಕ ಎರಡು ದಿನಗಳ ಕಾರ್ಯಕ್ರಮಕ್ಕೆಅದ್ದೂರಿ ಚಾಲನೆ ನೀಡಿದರು.

ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಕುಲಾಲ್ ಅಧ್ಯಕ್ಷರು, ಶ್ರೀ ರಕೇಶ್ವರಿ ಯುವಕ ಸಂಘ ರಿ. ನೇರಂಬೋಳು ಇವರು ವಹಿಸಿದ್ದರು.

ಮುಖ್ಯಅಥಿತಿ ಬೂಡಾ ದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ,ಯುವ ಶಕ್ತಿಯಿಂದ ದೇಶದ ಭವಿಷ್ಯ ನಿಂತಿದೆ, ಯುವ ಸಮೂಹ ಸನ್ಮಾರ್ಗದಲ್ಲಿ  ಮುಂದುವರಿದರೆ ದೇಶದ ಪ್ರಗತಿ ಸಾಧ್ಯ,ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರು ಸಂಘಟನೆ ಗಳಲ್ಲಿ ತೊಡಗಿಸಿಕೊಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದರು.

ವೇದಿಕೆಯಲ್ಲಿ ಮೀನಾಕ್ಷಿ ಗೌಡ, ಸದಸ್ಯರು, ಬಂಟ್ವಾಳ ಪುರಸಭೆ, ರಾಜ್ಯ ಕಾಂಗ್ರೆಸ್ ಸಂಯೋಜಕ ಚಿತ್ತರಂಜನ್ ಶೆಟ್ಟಿ ಬೊಂಡಲ , ಸಂತೋಷ್ ಕುಲಾಲ್ ನೆತ್ತರಕೆರೆ. ಪ್ರವರ್ತಕರು ಕೋಸ್ಟಲ್ ಬುಲೆಟಿನ್ ಸುದ್ದಿ ಮಾಧ್ಯಮ, ಮೋಹನ್ ಗೌಡ ಕಲ್ಮಂಜ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ, ನಾಗೇಶ್ ಕುಲಾಲ್ ಶಂಭೂರು ಇಂಜಿನಿಯರ್, ಬೂಬ ಸಾಲ್ಯಾನ್ ಮ್ಹಾಲಕರು, ವಿಕಾಸ್ ಐಸ್‌ಕ್ರೀಂ, ಮೊಗರ್ನಾಡು,ಜಯಂತಿ

ಕೆ. ಶೆಟ್ಟಿ ದರ್ಬೆ, ಪ್ರಗತಿಪರ ಕೃಷಿಕರು,ಸುರೇಶ್ ಕೋಟ್ಯಾನ್, ಕಾರ್ಯದರ್ಶಿ, ದ.ಕ. ಜಿಲ್ಲಾ ಯುವ ಮೋರ್ಚಾ, ಸಂತೋಷ್ ಕುಲಾಲ್ ನೆತ್ತರಕೆರೆ. ಪ್ರವರ್ತಕರು ಕೋಸ್ಟಲ್ ಬುಲೆಟಿನ್ ಸುದ್ದಿ ಮಾಧ್ಯಮ, ವೇದಿಕೆಯಲ್ಲಿ ಉಪಸ್ಥಿತರಿದ್ದರು,

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಮೋನಪ್ಪ ಮೂಲ್ಯ, ನೇರಂಬೋಳು, ಬೀಡಿ ಉದ್ಯಮಿ,ಸಂಜೀವ ಕಜೆಪದವು, ಭಾಗವತರು ಮತ್ತು ಯಕ್ಷಗುರುಗಳು ,ಕುಂಜಿರ ಗುರುಸ್ವಾಮಿ, ಚಾರ್ಮಾಡಿ, ಸಂಜೀವ ಮೂಲ್ಯ ನೇರಂಬೋಳು, ನಾಟಿ ವೈದ್ಯರು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಶ್ರೀ ರಕೇಶ್ವರಿ ಯುವಕ ಸಂಘದ ಗೌರವಾಧ್ಯಕ್ಷ ಮನೋಹರ್ ನೇರಂಬೋಳು ಸ್ವಾಗತಿಸಿ,ನವೀನ್ ಪೂಜಾರಿ ನೇರಂಬೋಳು ಧನ್ಯವಾದವಿತ್ತು ರವೀಂದ್ರ ನೇರಂಬೋಳು ಕಾರ್ಯಕ್ರಮ ನಿರೂಪಿಸಿದರು 

ಬೆಳಿಗ್ಗೆ ಗಣಹೋಮ ನಂತರ ಸತ್ಯನಾರಾಯಣ ಪೂಜೆ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಅಂಗನವಾಡಿ ಮಕ್ಕಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ನಡೆಯಿತು.

Leave a Comment