ಬಂಟ್ವಾಳ :ತಾಲೂಕಿನ ಕೊಡ್ಮಾಣ್ ಗ್ರಾಮದ ಕೊಟ್ಟಿಂಜ ಶ್ರೀರಾಮ ಮಂದಿರದ 18ನೇ ಪ್ರತಿಷ್ಟಾ ವರ್ಧಂತ್ಯುತ್ಸವ ಕಾರ್ಯಕ್ರಮವು ಮಾ 12ರಂದು ಮಂಗಳವಾರ ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ.
ಪ್ರತಿಷ್ಟಾ ವರ್ಧಂತ್ಯುತ್ಸವದ ಅಂಗವಾಗಿ ಅಂದು ಬೆಳಿಗ್ಗೆ ವೈಧಿಕ ಕಾರ್ಯಕ್ರಮಗಳು ಪ್ರಾರ್ಥನೆ, ಪುಣ್ಯಾಹ, ಗಣಪತಿ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮಹಾ ಮಂಗಳಾರತಿ ನಡೆಯಲಿದೆ.
ಮದ್ಯಾಹ್ನ 12.30ಕ್ಕೆ ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿ, ಸಂಸ್ಕರಣಾ ಕಾರ್ಯಕ್ರಮ ನಡೆಯಲಿದ್ದು ವಿಶೇಷ ಅಭ್ಯಾಗತರಾಗಿ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ತಪೋವನ ಪೊಳಲಿ ಆಶೀರ್ವಾಚನ ನೀಡಲಿದ್ದಾರೆ. ಅತಿಥಿಗಳಾಗಿ ಸತೀಶ್ ಕುಂಪಲ, ಅಧ್ಯಕ್ಷರು, ಭಾ.ಜ.ಪಾ ದ.ಕ, ದೇವಿಪ್ರಸಾದ್ ಶೆಟ್ಟಿ, ವಿಭಾಗ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ ಮಂಗಳೂರು ಭಾಗವಹಿಸಲಿದ್ದಾರೆ
ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4.00ರಿಂದ ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಮಲ್ಲೂರು ಇವರಿಂದ ಭಜನೆ ಸಂಜೆ ಮಹಾ ಮಂಗಳಾರತಿ, ಸಂಜೆ 6.30ಯಿಂದ ಕೊಟ್ಟಿಂಜ ಶ್ರೀ ರಾಮ ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 7ಕ್ಕೆ ಚೌಕಿ ಪೂಜೆ ನಂತರ ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ನೇತೃತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗರಾಜ ಕ್ಷೇತ್ರ, ಪಾವಂಜೆ ಇವರಿಂದ "ಅಯೋಧ್ಯಾ ದೀಪ"ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘಟಕರಾದ ಪದ್ಮನಾಭ ಶೆಟ್ಟಿ ಕೊಟ್ಟಿಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ









