ಕೊಡ್ಮಾಣ್: ಕೆನರಾ ಕಾಲೇಜು ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ.

Coastal Bulletin
ಕೊಡ್ಮಾಣ್: ಕೆನರಾ ಕಾಲೇಜು ಎನ್ ಎಸ್ ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ.

ಬಂಟ್ವಾಳ :ಕೆನರಾ ಕಾಲೇಜು ಮಂಗಳೂರು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ 23 -24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಬಂಟ್ವಾಳ ತಾಲೂಕಿನ ಕೊಡ್ಮಣ್ಣು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ 4ರಂದು ಸೋಮವಾರ ಜರುಗಿತು.

ಕೆನರಾ ಕಾಲೇಜಿನ ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ ನಾಯ್ಗ ಕೊಡ್ಮಾಣ್ ಕೊಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕೆನರಾ ಆಡಳಿತ ಮಂಡಳಿಯ ಸದಸ್ಯೆ ಅಶ್ವಿನಿ ಕಾಮತ್, ವ್ಯವಸ್ಥಾಪಕ ಕೆ. ಶಿವಾನಂದ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ಸಹ ಶಿಬಿರಾಧಿಕಾರಿ ಶುಭಂ ಕುಲಾಲ್ ಉಪಸ್ಥಿತರಿದ್ದರು.

ರಾಸೇಯೋ ಅಧಿಕಾರಿ ಎಂ ಕೀರ್ತನ ಭಟ್ ಸ್ವಾಗತಿಸಿ ಇನ್ನೋರ್ವ ಅಧಿಕಾರಿ ಸೀಮಾ ಪ್ರಭು ಎಸ್ ವಂದಿಸಿದರು. ಸ್ವಯಂಸೇವಕಿ ಭಾರ್ಗವಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭ ಶೆಟ್ಟಿ ಕೊಟ್ಟಿoಜ, ಮುರಾರಿ ಕಾಂಜಿಲಕೋಡಿ,

ಮಹಾಬಲ ಶೆಟ್ಟಿ ಕೊಡ್ಮಾಣ್, ಗೋಪಾಲ ಕುಲಾಲ್ ಗೋವಿಂತೋಟ, ಹರೀಶ್ ಕುಮಾರ್ ಕೊಡ್ಮಾಣ್, ಅಜಿತ್ ಕುಮಾರ್, ಚರಣ್ ಕುಮಾರ್ ಕಲ್ಲಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಏಳು ದಿನಗಳ ಶಿಬಿರದಲ್ಲಿ 113 ಸ್ವಯಂಸೇವಕರು ಭಾಗವಹಿಸಿ ಸ್ಮಶಾನ, ರಸ್ತೆ ಮತ್ತು ಚರಂಡಿ ದುರಸ್ತಿ , ಗ್ರಾಮ ಸಮೀಕ್ಷೆ, ಶಾಲಾ ಆವರಣ ಸ್ವಚ್ಛತೆ, ಕಾಗದ ಚೀಲ ತಯಾರಿ, ತ್ಯಾಜ್ಯ ನಿರ್ವಹಣೆ, ಸರಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಚಟುವಟಿಕೆಗಳನ್ನು ನಡೆಸಿದರು.

 ಕೊಡ್ಮಣ್ಣು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸರಳ ಗಣಿತ, ಚಿತ್ರಕಲೆ,ನೃತ್ಯ ಇತ್ಯಾದಿ ತರಬೇತಿ ನೀಡಿದರು. ಸ್ವಯಂಸೇವಕರಿಗೆ, ಗ್ರಾಮಸ್ಥರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಆಟೋಟ ಸಹಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

Leave a Comment