ಬಂಟ್ವಾಳ :ತಾಲೂಕಿನ ಅಮ್ಮುಂಜೆಯಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನ ಇದೀಗ ಜೀರ್ಣೋದ್ಧಾರಗೊಳ್ಳುತಿರುವ ಹಿನ್ನಲೆಯಲ್ಲಿ ನಿಧಿ ಕುಂಭಕ್ಕೆ ಚಾಲನೆ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಎ. ಮಂಜಯ್ಯ ಶೆಟ್ಟಿ ಅವರು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ನಿಧಿ ಕುಂಭಕ್ಕೆ ಚಾಲನೆ ನೀಡಿ, ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಅಮ್ಮುಂಜೆ ಗುತ್ತು ಸೋಮಶೇಖರ
ಶೆಟ್ಟಿ, ಆಡಳಿತ ಮೊಕ್ತೇಸರರಾದ ನಾಗೇಶ್ ರಾವ್, ಸುದೇಶ್ ಕುಮಾರ್ ರೈ, ಉದ್ಯಮಿ ಉಮೇಶ್ ಸಾಲ್ಯಾನ್, ರಾಧಾಕೃಷ್ಣ ತಂತ್ರಿ ಪೊಳಲಿ, ಅರ್ಚಕ ಶಶಿಧರ್ ಭಟ್, ಚಂದ್ರಶೇಖರ ಭಂಡಾರಿ, ಜನಾರ್ಧನ ಕನ್ಯಾಬೆಟ್ಟು, ವಿಜಯ್ ಸುವರ್ಣ, ಬಿ.ಜನಾರ್ಧನ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.















