ಬಂಟ್ವಾಳ :ವಿದ್ಯಾರ್ಥಿಗಳಿಗೆ ಮತದಾನದ ಸಾಕ್ಷರತೆ ಇರಬೇಕು ಯುವ ಸಮೂಹ ಚುನಾವಣೆಯ ಬಗ್ಗೆ ಅರಿವು ಒಲವು ಇರಬೇಕು ಎಂದು ಲಕ್ಷ್ಮೀನಾರಾಯಣ ಭಟ್ ಶಿಕ್ಷಣಾಧಿಕಾರಿ ಉಪನಿರ್ದೇಶಕರ ಕಚೇರಿ (ಆಡಳಿತ ) ಶಿಕ್ಷಣ ಇಲಾಖೆ ಇವರು ಮುಖ್ಯ ಚುನಾವಣಾಧಿಕಾರಿಗಳು ದ .ಕ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಮತ್ತು ಉಪ ನಿರ್ದೇಶಕರ ಕಚೇರಿ (ಆಡಳಿತ ) ಶಿಕ್ಷಣ ಇಲಾಖೆ ದ . ಕ , ಹಾಗೂ ಶ್ರೀ ರಾಮ ವಿದ್ಯಾ ಸಂಸ್ಥೆ ಅರ್ಕುಳ ಫರಂಗಿಪೇಟೆ ಸಹಯೋಗ ದೊಂದಿಗೆ ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ ಕೆ ಜಯರಾಮ ಶೇಖರವರ ಅದ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ನ ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಶೋಭಾ ಜಿ , ಜಿಲ್ಲಾ ಪಂಚಾಯತ್ ತಾಂತ್ರಿಕ ಸಹಾಯಕರು ಗಾಯತ್ರಿ ಭಟ್ , ಶಾಲಾ ಸಂಚಾಲಕರಾದ ಎ ಗೋವಿಂದ ಭಟ್
, ಶಾಲಾ ಮುಖ್ಯಸ್ಥರಾದ ಕೆ ಆರ್ ದೇವದಾಸ್ ,ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯಕುಮಾರ್ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶ್ರೀರಾಮ ವಿದ್ಯಾ ಸಂಸ್ಥೆಯ ಜಯ ಪದ್ಮ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.















