ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳೂರು ಸಂಸದರಾದ ಕ್ಯಾಪ್ಟನ್ ಬೃಜೇಶ್ ಚೌಟರವರ ಶಿಫಾರಸಿನ ಮೇರೆಗೆ ಎಂ ಆರ್ ಪಿ ಎಲ್ ನ 10 ಲಕ್ಷ ರೂಪಾಯಿಗಳ ಸಿ ಎಸ್ ಆರ್ ಅನುದಾನದ 12 ಶೌಚಾಲಯಗಳ ಸಮುಚ್ಛಯಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂದೀಪ್ ಕುಲಾಲ್ ಶಿಲಾನ್ಯಾಸ ನೆರವೇರಿಸಿದರು.
ತುಂಬೆ ದ ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ಬಹಳ ವರ್ಷಗಳಿಂದ ಹಿಂದೆ ಶೌಚಾಲಯ ಬೇಡಿಕೆಗೆ ಮನವಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಗಣೇಶ್ ಸಾಲ್ಯಾನ್ , ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ , ಪ್ರದಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು , ಬಿ ಜೆ ಪಿ ಮಂಗಳೂರು ಮಂಡಲ ಹಿಂದುಳಿದ ವರ್ಗ ಅಧ್ಯಕ್ಷ ಗಣೇಶ್ ಸುವರ್ಣ, ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ , ಪುದು ಮಹಾ
ಶಕ್ತಿ ಕೇಂದ್ರದ ಅಧ್ಯಕ್ಷ ಸುಕೇಶ್ ಶೆಟ್ಟಿ ತೇವು, ಕಾರ್ಯದರ್ಶಿ ರೂಪೇಶ್ ಜ್ಯೋತಿಗುಡ್ಡೆ , ಬಿಜೆಪಿ ಜಿಲ್ಲಾ ಮುಖಂಡರುಗಳಾದ ಜಯಶ್ರೀ ಕರ್ಕೇರ, ದಿನೇಶ್ ಶೆಟ್ಟಿ ಕೊಟ್ಟಿಂಜ , ಬಿ ಜೆ ಪಿ ಮಂಗಳೂರು ಮಂಡಲ ಮುಖಂಡರಾದ ಜಲಜಾಕ್ಷಿ ಕೋಟ್ಯಾನ್, ತುಂಬೆ ಗ್ರಾ ಪಂ ಮಾಜಿ ಅಧ್ಯಕ್ಷ ಪ್ರವೀಣ್ ಬಿ ತುಂಬೆ, ಗ್ರಾ ಪಂ ಸದಸ್ಯರುಗಳಾದ ಅರುಣ್ ಗಾಣದಲಚ್ಚಿಲ್ , ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಕುಂತಲಾ ಹರೀಶ್ ಕೊಟ್ಟಿಂಜ,ಮತ್ತಿತರರು ಇದ್ದರು. ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾ ಎಸ್ ಉಳ್ಳಾಲ್ ರವರು ಸ್ವಾಗತಿಸಿ ವಂದಿಸಿದರು










