ಆಲಂಕಾರು: ಸಮಾಜ ಸೇವಾ ಸಹಕಾರಿ ಸಂಘದ 17ನೇ ಶಾಖೆ ಶುಭಾರಂಭ. ದ.ಕ.ಜಿಲ್ಲೆ ಸಹಕಾರಿ ಕ್ಷೇತ್ರದ ತವರೂರು:ಡಾ| ಪ್ರಭಾಕರ್ ಭಟ್

Coastal Bulletin
ಆಲಂಕಾರು: ಸಮಾಜ ಸೇವಾ ಸಹಕಾರಿ ಸಂಘದ 17ನೇ ಶಾಖೆ ಶುಭಾರಂಭ. ದ.ಕ.ಜಿಲ್ಲೆ ಸಹಕಾರಿ ಕ್ಷೇತ್ರದ ತವರೂರು:ಡಾ| ಪ್ರಭಾಕರ್ ಭಟ್

ಬಂಟ್ವಾಳ :ಕಡಬ ತಾಲೂಕಿನ ಆಲಂಕಾರು ಮಾತೃ ಕೃಪಾ ಕಾಂಪ್ಲೆಕ್ಸ್ ನಲ್ಲಿ ಸಮಾಜ ಸೇವಾ ಸಹಕಾರಿ ಸಂಘ ನಿ.ಬಂಟ್ವಾಳ ಇದರ 17ನೇ ಆಲಂಕಾರು ಶಾಖೆಯನ್ನು ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹಾಗೂ ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ಜೊತೆಯಾಗಿ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಶ್ರೀರ್ವಚನ ನೀಡಿದ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಅವರು, ಸಮಾಜ ಸೇವಾ ಸಂಘ ಗ್ರಾಹಕರು ಕಡಿಮೆ ಇರುವ ಸಂಕಷ್ಟದ ಕಾಲದಲ್ಲಿ ಅನೇಕ ಸವಾಲುಗಳ ಮಧ್ಯೆ ಈ ಸಂಘ ಆರಂಭವಾಗಿದ್ದು, ಜನರ ಸಂಪರ್ಕ ಬೆಳೆದಿದೆಯಾದರೂ ಪ್ರಸ್ತುತ ದಿನಗಳಲ್ಲಿ ಪೈಪೋಟಿ,ಸಂಘರ್ಷ ,ಸವಾಲುಗಳಿವೆ,ಇವೆಲ್ಲವನ್ನು ಮೀರಿ ಸಹಕಾರ ಸಂಘ ಬೆಳೆಯಬೇಕಾದರೆ ಸಮದಾನದ ಚಿತ್ತದ ವ್ಯವಹಾರ ಬಹಳ‌ ಅಗತ್ಯವಿದೆ ಎಂದು ಹೇಳಿದರು. ಬ್ಯಾಂಕ್ ನ ಅಭಿವೃದ್ದಿಯ ದೃಷ್ಟಿಯಿಂದ ಸಾಲ ಪಡೆದ ಗ್ರಾಹಕ ದೇವರುಗಳು ಸಮಯಕ್ಕೆ ಸರಿಯಾಗಿ ತೀರಿಸುವ ಮನೋಭಾವ ರೂಡಿಸಿಕೊಳ್ಳಲಿ ಎಂದು ಅವರು ಹೇಳಿದರು.

ಸ್ವಸಹಾಯ ಸಂಘ ಒಗ್ಗಟ್ಟಿನಿಂದ ಕ್ರಿಯಾಶೀಲರಾಗಿ ಸಂಘದ ವ್ಯವಹಾರದಲ್ಲಿ ತೊಡಗಿಸಿಕೊಂಡಾಗ ಆಪತ್ಕಾಲದಲ್ಲಿ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು. ಪರವರ್ತನೆ ಮತ್ತು ಪರಮಾರ್ಜನೆ ಜಗದ ನಿಯಮವಾಗಿದ್ದು ತಾಂತ್ರಿಕ ವ್ಯವಸ್ಥೆಯ ಜೊತೆ ಬ್ಯಾಂಕ್ ಹೊಂದಿಕೊಂಡು ಗ್ರಾಹಕರ ಇಚ್ಚೆಗನುಗುಣವಾಗಿ ಶಿಸ್ತುಬದ್ಧವಾದ ವ್ಯವಹಾರ ಮಾಡಲಿ ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ದ.ಕ.ಜಿಲ್ಲೆ ಸಹಕಾರಿ ಕ್ಷೇತ್ರದ ತವರೂರು ಆಗಿದೆ. ರಾಜ್ಯಕ್ಕೆ ಗೌರವ ಕೊಡುವ ಜಿಲ್ಲೆಯಯಾಗಿದ್ದು,ಪ್ರಾಮಾಣಿಕ ಸೇವೆ ಮತ್ತು ವ್ಯವಹಾರವೇ ಇದಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

 ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳದಿಂದ ಆಲಂಕಾರುವರೆಗೆ ದೊಡ್ಡ ಯಾತ್ರೆಯನ್ನು ಮಾಡಿದೆ.ಅಲಂಕಾರು ಇದಕ್ಕೆ ಹೆಚ್ಚಿನ ಆಲಂಕಾರ ನೀಡಲಿದೆ ಎಂಬ ವಿಶ್ವಾಸವಿದ್ದು, ಈ ಭಾಗದ ಜನತೆ ಬ್ಯಾಂಕ್ ನ ಸಂಪೂರ್ಣ ಪ್ರಯೋಜನ ಪಡೆಯುವಂತೆ ಅವರು ಹೇಳಿದರು.

 ಹಿಂದೂ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು,ಸಮಾಜದ ಕೆಳಸ್ತರದ ಜನರನ್ನು ಆರ್ಥಿಕವಾಗಿ ಉನ್ನತಕ್ಕೇರುವ ನಿಟ್ಟಿನಲ್ಲಿ ಡಾ| ಅಮ್ಮೆಂಬಳ ಬಾಳಪ್ಪವರು ಪ್ರಾರಂಭಿಸಿದ ಈ ಸಹಕಾರ ಸಂಘ ಇಂದು ಸಾವಿರಾರು ಜನರಿಗೆ ಪ್ರಯೋಜನವಾಗಿದೆ ಎಂದರು.

  ಅಮ್ಮೆಂಬಳ ಬಾಳಪ್ಪ ಅವರು ಬಿಳಿ ಶರ್ಟ್ ಹಾಕಿ ಹೋರಾಟ ಮಾಡಿದರೆ ಸ್ವಾಮೀಜಿ ಅವರು ಖಾವಿ ಬಟ್ಟೆ ತೊಟ್ಟು ಕರ್ಮಯೋಗಿದ್ದಾರೆ. ಸಮಾಜದ ಅಭಿವೃದ್ಧಿಗೆ ನಿತ್ಯವೂ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

  ಸಹಕಾರಿ ಸಂಘ ಜನಹಿತಕ್ಕೋಸ್ಕರ ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಹುಟ್ಟಿಕೊಂಡಿದೆ.ಸಹಕಾರಿ ಸಂಘಗಳು ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಮತ್ತು ಸಕಾಲಿಕ ಸಮಯದಲ್ಲಿ ವಿಶ್ವಾಸದ ಮೇಲೆ ಸಾಲವನ್ನು ನೀಡುತ್ತದೆ. ಸರ್ವ ಸಾಮನ್ಯ ಜನರ ಜೊತೆ ನಿತ್ಯ ಒಡನಾಟ ಇರುವುದು ಸಹಕಾರ ಸಂಘಗಳು ಮಾತ್ರ ಎಂದರು.ಸುರೇಶ್ ಕುಲಾಲ್ ಅವರ ನೇತ್ರತ್ವದಲ್ಲಿ ಸಮಾಜ ಸೇವಾಸಹಕಾರ ಸಂಘ ಅತ್ಯಂತ ಯಶಸ್ವಿಯಾಗಿ ಮುಂದೆ ಹೋಗುತ್ತಿದೆ ಎಂಬುದು ಸಂತಸವಿದೆ.

 ಗ್ರಾಹಕರೇ ಬ್ಯಾಂಕ್ ಗೆ ದೇವರಾಗಿದ್ದಾರೆ. ಗ್ರಾಹಕರು ಸೌಲಭ್ಯ ಪಡೆಯಬೇಕು,ನೌಕರರ ಮತ್ತು ಗ್ರಾಹಕರ ಮಧ್ಯೆ ಉತ್ತಮ ಸಂಬಂಧವಿರಬೇಕು,ಆದರೆ ಬ್ಯಾಂಕ್ ಏಳಿಗೆಗೆ ಆಡಳಿತ ಮಂಡಳಿಯ ಜವಬ್ದಾರಿ ಕೂಡ ಬಹಳ ದೊಡ್ಡದಿದೆ ಎಂದು ನೆನಪಿಸಿದರು. ಅನೇಕ ದಶಕಗಳ ಸಮಯ ಸಾವಿರಾರು ಜನರಿಗೆ ಸಹಕಾರ ನೀಡಬೇಕಾದ ಸಂಸ್ಥೆಯಾಗಿರಬೇಕಾಗಿರುವುದರಿಂದ ಅಹಂ ಬಿಟ್ಟು ಎಲ್ಲರೂ ಜೊತೆಯಾಗಿ‌ ಕೆಲಸ ಮಾಡಿ ಎಂದರು.


ಸೇಫ್ ಲಾಕರ್ ಉದ್ಘಾಟಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಸಹಕಾರ ಸಂಘದಲ್ಲಿ ನೌಕರರ ವೃಂದದವರು ಗ್ರಾಹಕರ ಜೊತೆಗೆ

ನಡೆದುಕೊಳ್ಳುವ ರೀತಿಯ ಮೇಲೆ ವ್ಯವಹಾರದ ಗುಟ್ಟು ಇದೆ. ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದರೆ ಆರೋಗ್ಯಕ್ಕೆ ಉತ್ತಮವೆಂದು ವೈಜ್ಞಾನಿಕ ಅಧ್ಯಯನ ಹೇಳಿದೆ. ಅಂತಹ ಕುಂಬಾರಿಕೆ ಕೆಲಸ ಮಾಡುತ್ತಿದ್ದ ಸಮುದಾಯವು ತಾವು ಬೆಳೆಯುವುದರ ಜೊತೆ ಸಮಾಜದ ಎಲ್ಲಾ ಜನರನ್ನು ಬೆಳೆಯುವ ನಿಟ್ಟಿನಲ್ಲಿ ಆರಂಭಿಸಿದ ಸಂಸ್ಥೆ ಇದೀಗ ಉನ್ನತ ಮಟ್ಟಕ್ಕೆ ಏರಿರುವುದು ಅತ್ಯಂತ ಸಂತಸವಾಗಿದೆ. ಬ್ಯಾಂಕ್ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಡವಾಗಲು ಪೂರಕವಾದ ವಾತಾವರಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜ ಸೇವಾ ಸಹಕಾರಿ ಸಂಘ .ನಿ.ಬಂಟ್ವಾಳ ಇದರ ಅಧ್ಯಕ್ಷ ಸುರೇಶ್ ಕುಲಾಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ 18 ನೇ ಶಾಖೆ ಜ. 14 ರಂದು ಬೋಳ್ಯಾರು ಎಂಬಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.

 ಅಮ್ಮೆಂಬಳ ಬಾಳಪ್ಪ ಅವರ ಕಸನು ಸಮಾಜ ಸೇವಾ ಸಹಕಾರಿ ಬ್ಯಾಂಕ್ ಆಗಿದ್ದು, ಅವರ ಚಿಂತನೆಯ ಪ್ರಕಾರ ಬ್ಯಾಂಕ್ ನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಆಡಳಿತ ಮಂಡಳಿ ವಹಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ಸ್ವಂತ ಕಟ್ಟಡವನ್ನು ಹೊಂದಿರುವ ಬ್ಯಾಂಕ್ ವರ್ಷದಲ್ಲಿ ಅಂತ್ಯದಲ್ಲಿ 1159 ಕೋಟಿ ವ್ಯವಹಾರ ನಡೆಸಿ, 5.04 ಕೋಟಿ ಲಾಭ ಹೊಂದಿದೆ.ಸದಸ್ಯರಿಗೆ 17 ಪರ್ಸೆಂಟ್ ಲಾಭಾಂಶ ನೀಡಿದೆ ಎಂದು ಅವರು ತಿಳಿಸಿದರು.

ಆಲಂಕಾರು ಗ್ರಾ.ಪಂ.ಅಧ್ಯಕ್ಷೆ ಸುಶೀಲ ಅವರು ಸೇಫ್ ಲಾಕರ್ ಉದ್ಘಾಟಿಸಿದರು.ಕುಲಾಲ ಸಂಘ (ರಿ.) ಬೆಂಗಳೂರು ಇದರ ಅಧ್ಯಕ್ಷ ದಿವಾಕರ ಮೂಲ್ಯ ಅವರು ಠೇವಣಿ ಪತ್ರ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ಲ್ಯಾಂಪ್ಸ್ ಸಹಕಾರ ಸಂಘದ ನಿರ್ದೇಶಕ ಪೂವಪ್ಪ ನಾಯ್ಕ, ಎಸ್. ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಮಹೇಶ್ ಸವಣೂರು, ಎಂಡೋ ವಿರೋಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಪೀರ್ ಮೊಹಮ್ಮದ್ ಸಾಹೇಬ್, ಆಲಂಕಾರು ಗ್ರಾ.ಪಂ.ಉಪಾಧ್ಯಕ್ಷ ರವಿ ಪೂಜಾರಿ, ಆಲಂಕಾರು ಗ್ರಾ‌.ಪಂ.ಪಿಡಿಒ ಸುಜಾತ ಕೆ. ಆಲಂಕಾರು ಶತಾಕ್ಷಿ ಕ್ಲಿನಿಕ್ ಮತ್ತು ಲ್ಯಾಬೋರೇಟರಿಯ ಡಾ| ಕೃತಿ ಶೆಟ್ಟಿ, ಶಾಖಾ ಕಟ್ಟಡದ ಮಾಲಕ ಕುಶಾಲಪ್ಪ ಗೌಡ ಸುರುಳಿ,ಬ್ಯಾಂಕ್ ನ ಉಪಾಧ್ಯಕ್ಷ ಜನಾರ್ಧನ ಬೊಂಡಾಲ, ನಿರ್ದೇಶಕರುಗಳಾದ ರಮೇಶ್ ಸಾಲಿಯಾನ್, ಅರುಣ್ ಕುಮಾರ್ ಕೆ.ಸತೀಶ್, ಬಿ.ರಮೇಶ್ ಸಾಲಿಯಾನ್, ಸುರೇಶ್ ಕುಲಾಲ್ ಎನ್, ಭೋಜ ಸಾಲಿಯಾನ್, ಕಿರಣ್ ಕುಮಾರ್ ಎ.ಹರೀಶ್, ಪ್ರೇಮನಾಥ ಬಂಟ್ವಾಳ, ವಿದ್ಯಾ, ಮಾಲತಿಮಚ್ಚೇಂದ್ರ, ಜಗನ್ನೀವಾಸ ಗೌಡ, ಗಣೇಶ್ ಸಮಗಾರ,ರೇಖಾ ನಾಯಕ್, ಶಾಖಾ ಪ್ರಭಾರ ವ್ಯವಸ್ಥಾಪಕಿ ಉಷಾ, ಹಾಗೂ ನೌಕರರ ವೃಂದ ಉಪಸ್ಥಿತರಿದ್ದರು.

ಆಲಂಕಾರು ಪರಿಸರದಲ್ಲಿ ಸಹಕಾರ ಸಂಘ ನಿರ್ಮಾಣದ ಬಗ್ಗೆ ಪ್ರಚಾರಪಡಿಸಿದ ಸ್ಥಳೀಯರಾದ ದಿವಾಕರ್ ಮತ್ತು ಆದ್ಯ ಶೀನಪ್ಪ‌ ಕುಂಬಾರ, ಕಟ್ಟಡದ ಮಾಲೀಕ ಕುಶಾಲಪ್ಪ ಗೌಡ ಸುರುಳಿ ಹಾಗೂ ಸಿವಿಲ್ ಇಂಜಿನಿಯರ್ ಲಕ್ಮೀನಾರಾಯಣ ಅಲೆಪಾಡಿ ಅವರುಗಳನ್ನು ಸನ್ಮಾನಿಸಲಾಯಿತು.

   ಮಾತಶ್ರೀ ಅಮೂಲ್ಯ ಸ್ವಸಹಾಯ ಸಂಘ, ಶ್ರೀ ದೇವಿ ಅಮೂಲ್ಯ ಸ್ವಹಾಯ ಸಂಘ, ಶ್ರೀದುರ್ಗೆ ಅಮೂಲ್ಯ ಸ್ವಹಾಯ ಸಂಘ , ಶ್ರೀರಾಮ ಅಮೂಲ್ಯ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ಸಂಘದ ಪುಸ್ತಕ ಹಸ್ತಾಂತರ ಮಾಡಿ ಗೌರವ ನೀಡಲಾಯಿತು.

ಶಾಖಾ ಪ್ರಧಾನ ವ್ಯವಸ್ಥಾಪಕ ಭೊಜ ಮೂಲ್ಯ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

 ನಿರ್ದೇಶಕರುಗಳಾದ ಸತೀಶ್ ಪಲ್ಲಮಜಲು ಸ್ವಾಗತಿಸಿ, ಕಿರಣ್ ಕುಮಾರ್ ಎ ಧನ್ಯವಾದ ನೀಡಿದರು.ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Comment