ಬಂಟ್ವಾಳ :ಸಂಸ್ಕಾರ ಭಾರತಿ ದ ಕ ಜಿಲ್ಲೆ ಬಂಟ್ವಾಳ ತಾಲೂಕು ಘಟಕ ಆಯೋಜಿಸಿರುವ ಮಕ್ಕಳ ಬೇಸಿಗೆ ರಜಾ ಹಬ್ಬ "ಸಂಸ್ಕಾರ ಸೌರಭ"ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದ ಪ್ರಾಂಗಣದಲ್ಲಿ ಮೇ 4ರಂದು ಉದ್ಘಾಟನೆ ಗೊಂಡಿತು.
ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಕರ್ಕೇರ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ದ ಕ ಜಿಲ್ಲೆಯ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು , ಬಂಟ್ವಾಳ ತಾಲೂಕು ಸಂಯೋಜಕರಾದ ಮಂಜು ವಿಟ್ಲ , ಬಜರಂಗ ದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಂಭ್ಡೇಲು , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಮಾದವ
ನಾಣ್ಯ ಪುದು ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ ಉಮಾ ಚಂದ್ರ ಶೇಖರ್ , ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿ ದ ಕ ಜಿಲ್ಲಾ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಯವರು ಸ್ವಾಗತಿಸಿದರು. ಧೀರಜ್ ಮಾರಿಪಳ್ಳ ವಂದಿಸಿದರು.ಸಾಲೆತ್ತೂರು ಸಂಸ್ಕಾರ ಭಾರತಿ ಸದಸ್ಯೆ ಹರ್ಷಿತಾರವರು ನಿರೂಪಿಸಿದರು. ಮಾನಸ ರವರು ದ್ಯೇಯ ಗೀತೆ ಹಾಡಿದರು.ಮೊದಲ ದಿನ ಅಭಿನಯ ತರಗತಿಯನ್ನು ಭರತನಾಟ್ಯ ಕಲಾವಿದೆ ರಂಗಕರ್ಮಿ ತೃಷಾ ಶೆಟ್ಟಿ ಕೊಟ್ಟಿಂಜ ರವರು ನಿರ್ವಹಿಸಿದರು.















