Coastal Bulletin

ಬಂಟ್ವಾಳ:ಇಲ್ಲಿನ ಪುರಸಭೆಗೆ ಕಳೆದ ಸಾಲಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ 57 ಮಂದಿ ಇತರ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 18 ಮಂದಿ ಪರಿಶಿಷ್ಟ ಜಾತಿ -ಪಂಗಡದವರಿಗೆ ಗುರಿ ನಿಗದಿಪಡಿಸಿದಂತೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಫಲಾನುಭವಿಗಳು ಜಮೀನಿನ ದಾಖಲೆ ಪತ್ರದೊಂದಿಗೆ

ಇದೇ 15ರೊಳಗೆ ಪುರಸಭಾ ಕಛೇರಿಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. 

Leave a Comment