Coastal Bulletin

ಬಂಟ್ವಾಳ :ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ವತಿಯಿಂದ 2023 ಹೊಸ ವರ್ಷದ ಸಂಭ್ರಮದ ಸ್ವಾಗತ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಜ.1ರಂದು ಬಿಸಿರೋಡ್ ರೋಟರಿ ಸಭಾ ಭವನದಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ ಕಾರಂತ್ ಮಾತನಾಡಿ, ಈ ಕ್ಲಬ್ ಹೊಸ ವರ್ಷಾಚರಣೆಯನ್ನು ಸಮಾಜ ಸೇವಕರು ಹಾಗೂ ಕಲಾವಿದರನ್ನು ಸನ್ಮಾ ನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿರುವುದು ಶ್ಲಾಘನೀಯ ಮಾತ್ರವಲ್ಲ ಅನುಕರಣಿಯ ಎಂದು ಅಭಿಪ್ರಾಯಪಟ್ಟು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ದಿ ದೇವರಾಜ ಅರಸು ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ ಅಣ್ಣಯ್ಯ ಕುಲಾಲ ದಂಪತಿ ಹಾಗೂ ಕಲಾವಿದ ತುಳು ಭಾಷಾ ನಿರೂಪಕ ರೊ ದಿನೇಶ್ ಸುವರ್ಣ ರಾಯಿ, ನ್ಯಾಯ ವಾದಿಗಳಾದ ರೊ ಜಯರಾಮ್ ರೈ, ರೊ. ದಯಾನಂದ ರೈ, ರೊ. ಆಶಾಮಣಿ ಡಿ ರೈ, ರೊ. ಸುರೇಶ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕ್ಲಬ್ ಅಧ್ಯಕ್ಷರಾದ ರೊ. ಪಲ್ಲವಿ ಕಾರಂತ್, ಅಸಿಸ್ಟೆಂಟ್ ಗವರ್ನರ್ ಗಳಾದ ರೊ ಮಂಜುನಾಥ ಆಚಾರ್ಯ, ರೊ. ಎಲಿಯಾಸ್ ಸಾಂಕ್ಟಿಸ್, ವಲಯ ಸೇನಾನಿಗಳಾದ ರೊ

ಸತೀಶ್ ಕುಮಾರ್, ರೊ. ರಾಘವೇಂದ್ರ ಭಟ್,ಜಿ ಎಸ್ ಆರ್ ಪದ್ಮನಾಭ ರೈ ಕಾರ್ಯದರ್ಶಿ ರೊ ಆಶಾಮಣಿ ಡಿ ರೈ, ಉಪಾಧ್ಯಕ್ಷರಾದ ರೊ. ಜಗನ್ನಾಥ ಚೌಟ ಹಾಗೂ ನಿಯೋಜಿತ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಗೋಳ್ತಮಜಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹರಿಣಿ ಸತೀಶ್ ಕುಮಾರ್, ರೊ. ಮಧುಸೂಧನ್ ಶೆಣೈ, ರೊ. ಗಣೇಶ್ ಸಾಲಿಯಾನ್, ರೊ. ಸುಧೀರ್ ಶೆಟ್ಟಿ, ರೊ. ಉಮೇಶ್ ನೆಲ್ಲಿಗುಡ್ಡೆ ವಹಿಸಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ರೊ ಭಾರತಿ ಶೇಷಪ್ಪ ಮಾಡಿ ಕ್ಲಬ್ ನ ಸದಸ್ಯರೆಲ್ಲರಿಗೆ ಒಳಂಗಣ ಆಟಗಳನ್ನು ನಡೆಸಿ ಕೊಟ್ಟರು. ಅಧ್ಯಕ್ಷರು ಸ್ವಾಗತಿಸಿ ಕಾರ್ಯದರ್ಶಿ ವಂದಿಸಿದರು. ರೊ ಶೇಷಪ್ಪ ಮಾಸ್ಟರ್, ರೊ. ಪ್ರಕಾಶ್ ಕಾರಂತ್, ರೊ. ಸುಂದರ ಬಂಗೇರ, ವಿಜಯ ಲಕ್ಶ್ಮೀ ಎಂ ಶೆಣೈ ಸಹಕರಿಸಿದ್ದರು. ಕೊನೆಯಲ್ಲಿ ರೋಟರಿ ಕುಟುಂಬ ಸದಸ್ಯರಿಂದ ವೈವಿಧ್ಯ ಮಯ ಮನೋರಂಜನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು.

Leave a Comment