ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಎಸೋಸಿಯೇಶನ್ ಬಂಟ್ವಾಳ ಕ್ಷೇತ್ರ ಸಮಿತಿಯ ಮಹಾಸಭೆ ಹಾಗೂ ಟೈಲರ್ ವೃತ್ತಿ ಬಾಂಧವರಿಗೆ ಸನ್ಮಾನ ಮತ್ತು ಟೈಲರ್ ಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ಆ 3ರಂದು ಆದಿತ್ಯವಾರ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ನಾರಾಯಣ ಬಿ.ಎ. ಉದ್ಘಾಟಿಸಿ ಮಾತನಾಡಿ,ನಮ್ಮವರಿಂದ ನಮಗಾಗಿ ಎಂಬ ಉದ್ದೇಶದಿಂದ ಟೈಲರ್ ಸಂಘಟನೆಯು ಸಮಾಜದಲ್ಲಿ ಇಂದು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ ಸಭೆಯು ಟೈಲರ್ ವೃತ್ತಿ ನಿರತರ ಕುಟುಂಬದ ಹಬ್ಬವಾಗಿ ಆಯೋಜನೆಯಾಗಿ ಯಶಸ್ವಿಯಾಗಿದೆ ಎಂದು ಹೇಳಿದರು.
ಅಂಚೆ ಇಲಾಖೆಯ ಮಾರುಕಟ್ಟೆ ವಿಸ್ತರಣಾಧಿಕಾರಿ ಗುರುಪ್ರಸಾದ್ ಮಾಹಿತಿ ನೀಡಿ ಟೈಲರ್ ವೃತ್ತಿಯ ಜನರು ತಾಳ್ಮೆ ಸಹನೆಯುಳ್ಳವರು, ಎಲ್ಲಾ ಜಾತಿ ಧರ್ಮಗಳ ಜನರು ಮಾಡುವ ಏಕೈಕ ವೃತ್ತಿ ಟೈಲರಿಂಗ್ ವೃತ್ತಿ ಎಂದು ಹೇಳಿದರು ಹಾಗೂ ಅಂಚೆ ಇಲಾಖೆಯಲ್ಲಿ ವಿವಿಧ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ಕೆಎಸ್‌ಟಿಎ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ನಾಗೇಶ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಸ್ಪರ ಸಹಕಾರ ಒಗ್ಗಟ್ಟಿನಿಂದ ತನ್ನ ಅಧಿಕಾರವಧಿ ಉತ್ತಮವಾಗಿ ಸಾಗಿದ್ದು, ಮುಂದೆಯೂ ಎಲ್ಲರ ಸಹಕಾರ ಇರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿ ಹಾಗೂ ವಿವಿಧ ವಲಯಗಳ ಹಿರಿಯ
ಟೈಲರ್ ಗಳನ್ನು ಗೌರವಿಸಲಾಯಿತು. ನಗರ ಸಮಿತಿಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಟೈಲರ್ ವೃತ್ತಿನಿರತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಪ್ರಜ್ವಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲ್ಯಾನ್, ಜಿಲ್ಲಾಧ್ಯಕ್ಷೆ ವಿದ್ಯಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೋಹನ್ ಎಸ್. ಕೋಡಿ, ಉಪಾಧ್ಯಕ್ಷ ದೇಜಪ್ಪ ವಿ. ಪೂಜಾರಿ, ನಿಕಟಪೂರ್ವ ಕೋಶಾಧಿಕಾರಿ ಈಶ್ವರ್ ಕುಲಾಲ್ ಭಾಗವಹಿಸಿದ್ದರು. ವಿವಿಧ ವಲಯದ ಅಧ್ಯಕ್ಷ, ಹಾಗೂ ಪದಾಧಿಕಾರಿಗಳಾದ ಸದಾನಂದ ಫರಂಗಿಪೇಟೆ, ಇಂದಿರಾ ಬಿ.ಸಿ.ರೋಡು, ಸೀತಾರಾಮ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ದಯಾನಂದ ರಾಯಿ, ಕವಿತಾ , ರಾಜೇಂದ್ರ ಬಿ.ಸಿ. ರೋಡು, ವಾರಿಜ, ಆಶಾ ಗಿರಿಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಯಾದೇಶ್ ತುಂಬೆ ವರದಿ ವಾಚಿಸಿದರು, ಕೋಶಾಧಿಕಾರಿ ತುಳಸಿ ಲೆಕ್ಕಪತ್ರ ಮಂಡಿಸಿದರು. ಸದಸ್ಯರಾದ ವಸಂತ ಪೂಜಾರಿ ಕಲ್ಲಡ್ಕ ಹಾಗೂ ಕಸ್ತೂರಿ ಪಿ. ಶೆಟ್ಟಿ ಮಾಣಿ ಕಾರ್ಯಕ್ರಮ ನಿರೂಪಿಸಿದರು.














