ಮುಂಬಯಿ : ಕುಲಾಲ ಸಮುದಾಯದಿಂದ ಇಂದು ಎರಡನೇ ಇತಿಹಾಸ ನಿರ್ಮಾಣಗೊಂಡಿದೆ. ಮುಂದಿನ ಪೀಳಿಗೆಯ ಭವಿಷ್ಯಕ್ಕೆ ನಿರ್ಮಾಣಗೊಳ್ಳುತ್ತಿರುವ ಕುಲಾಲ ಸಮುದಾಯದ ಸ್ವಾಭಿಮಾನದ ದೇವಸ್ಥಾನ. ವೀರನಾರಾಯಣ ದೇವಸ್ಥಾನವು ಕುಲಾಲ ಸಮುದಾಯದ ಶಕ್ತಿ ಕೇಂದ್ರವಾಗಿದೆ. ಮುಂಬಯಿಯ ಸಮಿತಿ ನಿರ್ಮಾಣಗೊಳ್ಳುದರ ಮೂಲಕ ನಮಗೆ ಶಕ್ತಿ ಹೆಚ್ಚಿದೆ, ನಮಗೆ ಆನೆಬಲ ಸಿಕ್ಕಿದಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ನುಡಿದರು.
ಮೇ. 29 ರಂದು ಸಂಜೆ ಮುಂಬಯಿ ಸಂತಾಕ್ರೂಸ್ ಪೂರ್ವದ ಪೇಜಾವರ ಮಠದಲ್ಲಿ ಜರಗಿದ ಮಂಗಳೂರು ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂಬೈ ಸಮಿತಿ ರಚಿಸುವ ಸಮಾಲೋಚನೆ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಯೂರ್ ಉಳ್ಳಾಲ್ ಮುಂಬಯಿಗರು ಮುಂಬಯಿ ಮಹಾನಗರದ ಮಹಾ ಜನರು . ಊರಲ್ಲಿ ಯವುದೇ ಧಾರ್ಮಿಕ ಕಾರ್ಯ ನಡೆಯುವಲ್ಲಿ ಮುಂಬಯಿಗರ ಕೊಡುಗೆ ಅಪಾರ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಗಮಿಸಿದ ನೀವು ಸಾಹಸಿಗರು. ದೇವಸ್ಥಾನದಿಂದ ಕೇವಲ ಪೂಜೆ ಮಾತ್ರವಲ್ಲ ಸಾಮಾಜಿಕ ಬದಲಾವಣೆ ಹಾಗೂ ಸಮಸ್ಯೆ ಪರಿಹಾರವಾಗುತ್ತದೆ. ಜನರನ್ನು ಒಗ್ಗೂಡಿಸುವ ಶಕ್ತಿ ದೇವಸ್ಥಾನಕ್ಕಿದೆ. ಮೂರು ದಿನಗಳ ಕಾಲ ನಡೆಯಲಿರುವ ದೇವಸ್ಥಾನದ ಭ್ರಹ್ಮ ಕಲಶಕ್ಕೆ ನೀವೆಲ್ಲರೂ ಬರಬೇಕು. ಸಮುದ್ರಕ್ಕೆ ನದಿ ಸೇರುವಂತೆ ಕುಲಾಲ ಸಮುದಾಯದ ಕುಲದೇವರಾದ ಕುಲಶೇಖರದ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂಬಯಿಗರೆಲ್ಲರೂ ಕೈಜೋಡಿಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರು ವಹಿಸಿದ್ದರು.ಜ್ಯೋತಿ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ ಸಾಲಿಯಾನ್ ಅವರು ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಸಭೆಗೆ ಚಾಲನೆಯಿತ್ತರು. ಕು. ಲಾಸ್ಯಾ ಡಿ. ಕುಲಾಲ್ ಅವರು ಪ್ರಾರ್ಥನೆ ಮಾಡಿದರು.ಮುಖ್ಯ ಅತಿಥಿಯಾಗಿ
ಶ್ರೀ ವೀರನಾರಾಯಣ ಸೇವಾ ಟ್ರಸ್ಟಿನ ಕಾರ್ಯಾಧ್ಯಕ್ಷ ಪ್ರೇಮಾನಂದ ಕುಲಾಲ್ ಮತ್ತು ಇನ್ನೋರ್ವ ಮುಖ್ಯ ಅತಿಥಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಕುಲಾಲ್ ಕಲ್ಬಾವಿ ಯವರು ವೇದಿಕೆಯಲ್ಲಿ ಇದ್ದರು.
ಕುಲಾಲ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಅವರು ಎಲ್ಲರನ್ನೂ ಸ್ವಾಗತಿಸುತ್ತಾ ಕುಲಾಲ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತರು. ಕುಲಾಲ ಸಂಘ ಮುಂಬಯಿಯ ಕೋಶಾಧಿಕಾರಿ ಜಯ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಊರಿನಿಂದ ಆಗಮಿಸಿದ ಗಣ್ಯರು ಶ್ರೀ ವೀರನಾರಾಯಣ ದೇವರ ಭಾವ ಚಿತ್ರವನ್ನು ದೇವದಾಸ ಕುಲಾಲ್ ಮತ್ತು ಗಿರೀಶ್ ಬಿ. ಸಾಲ್ಯಾನ್ ಅವರಿಗೆ ಹಸ್ತಾಂತರಿಸಿದರು. ಆನಂದ ಮೂಲ್ಯ ಅವರು ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಮಧ್ಯಾಹ್ನ ಗಣೇಶ್ ಎರ್ಮಾಲ್ ಅವರಿಂದ ಭಕ್ತಿ ಭಾವಗೀತೆ ಮತ್ತು ವಿದುಷಿ ಸುಕನ್ಯಾ ಭಟ್ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ನಡೆಯಿತು. ಸುಚಿತಾ ಬಂಜನ್ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದ್ದು, ರತ್ನಾ ಡಿ. ಕುಲಾಲ್ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.
ಅಧ್ಯಕ್ಷರಾಗಿ ದಿನೇಶ್ ಕುಲಾಲ್ ಆಯ್ಕೆ
ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮುಂಬಯಿಯ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ, ಸಮಾಜ ಸೇವಕ ದಿನೇಶ್ ಕುಲಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.













