Coastal Bulletin

ಮಂಗಳೂರು:ಸ್ವಸ್ತಿಕ ನ್ಯಾಷನಲ್ ಸ್ಕೂಲ್, ಊರ್ವಸ್ಟೋರ್, ಇಲ್ಲಿ ನೂತನವಾಗಿ ಪ್ರಾರಂಭಿಸಿರುವ ಯಕ್ಷಗಾನ ತರಬೇತಿ ಕೇಂದ್ರ “ಸ್ವಸ್ತಿಕ ಯಕ್ಷವಾಸ್ಯo” ಇದರ ಉದ್ಘಾಟನಾ ಸಮಾರಂಭವು ಜೂನ್ 3ರಂದು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು .

ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಖ್ಯಾತ ರಂಗ ಕಲಾವಿದ ಭೋಜರಾಜ ವಾಮಂಜೂರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯೆಗಿಂತ ಮಿಗಿಲಾದುದು ಯಾವುದೂ ಇಲ್ಲ, ವಿದ್ಯೆಯನ್ನು ಕಲಿತು ನಾವು ಮಾಡಿದ ಸಾಧನೆಯನ್ನು ಇನ್ನೊಬ್ಬರು ಗುರುತಿಸಬೇಕು, ಇದು ವಿದ್ಯೆ ಆಗಿರಲೂಬಹುದು, ಕಲೆಯೂ ಆಗಿರಬಹುದು ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಯಕರ ಪಂಡಿತರು ಈ ಪರಿಸರದಲ್ಲಿ ಯಕ್ಷಗಾನಕ್ಕೆ ಅತಿಯಾದ ಬೇಡಿಕೆ ಇದೆ. ಇದನ್ನು ಇನ್ನಷ್ಟು ಬೆಳೆಸಿ ಎಂದು ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು

ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳರು ವಿದ್ಯಾರ್ಥಿಯೇ ಗುರುವಾಗಿ ತರಗತಿಯನ್ನು ನಡೆಸುವುದು ನೋಡಲು ಬಹಳ ಸುಂದರ. ತರಗತಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಅನುವು ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು. 

ಸಂಸ್ಥೆಯ ಪ್ರಾಂಶುಪಾಲರಾದ ಡಾ. ಮಾಲಿನಿ ಎನ್ ಹೆಬ್ಬಾರರು ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಭುವನ್ ಶೆಟ್ಟಿ ವಂದಿಸಿದರು. ಪ್ರಾಧ್ಯಾಪಕಿ ವಿದ್ಯಾಲಕ್ಷ್ಮಿ ಪಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment